ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾಲ್ಗೊಳ್ಳಿ- ಪಿಡಿಒ ಸುರೇಶ ಪಾಟೀಲ್ ಸಲಹೆ

Maski Womens Day
ಮಸ್ಕಿ ತಾಲೂಕಿನ ಸಾನಬಾಳ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹಿರಿಯ ಕೂಲಿಕಾರ ಮಹಿಳೆಯರನ್ನು ಗುರುವಾರ ಸನ್ಮಾನಿಸಲಾಯಿತು.
Published on

ಮಸ್ಕಿ: ಸಂವಿಧಾನದಿಂದಾಗಿ ಮಹಿಳೆಯರು ರಾಷ್ಟ್ರಪತಿ ಸೇರಿ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಮಾದರಿಯಾಗಿದ್ದಾರೆ ಎಂದು ಪಿಡಿಒ ಸುರೇಶ ಪಾಟೀಲ್ ಹೇಳಿದರು.

ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಸಾನಬಾಳ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹಿರಿಯ ಕೂಲಿಕಾರ ಮಹಿಳೆಯರನ್ನು ಸನ್ಮಾನಿಸಿ ಗುರುವಾರ ಮಾತನಾಡಿದರು. ಅನೇಕ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಂಡು ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.

ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಹೆಚ್ಚಿಸಲು ಈ ವರ್ಷ ಉದ್ಯೋಗ ಸಬಲೀಕರಣ ಅಭಿಯಾನ ಏರ್ಪಡಿಸಲಾಗಿದೆ. ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ. 50 ರಿಂದ 60 ಕ್ಕೆ ಹೆಚ್ಚಿಸಬೇಕಿದೆ ಎಂದು ಸುರೇಶ ಪಾಟೀಲ್ ತಿಳಿಸಿದರು.

ಕೆಎಚ್‌ಪಿಟಿ ಸಹಕಾರದೊಂದಿಗೆ ಮಹಿಳಾ ಕೂಲಿಕಾರರ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು. ಕಾಯಕ ಮಿತ್ರರಿಗೆ ಟೀ ಶರ್ಟ್, ಕ್ಯಾಪ್ ವಿತರಿಸಲಾಯಿತು. ಪ್ರಮುಖರಾದ ಮಹೇಂದ್ರ, ಸತೀಶ, ವಿರುಪಣ್ಣ, ಸ್ವ ಸಹಾಯ ಗುಂಪಿನ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net