ಪ್ರತಿ ತಿಂಗಳು ರೂ. 3 ಸಾವಿರ ಮಾಶಾಸನ ನೀಡಿ; ದೇವದಾಸಿಯರಿಂದ ತಹಸೀಲ್ದಾರ್‌ಗೆ ಮನವಿ

20092021 Maski Devadasi appel
Published on

ಮಸ್ಕಿ: ಪ್ರತಿ ತಿಂಗಳು 3 ಸಾವಿರ ರೂ. ಮಾಸಾಶನ ನೀಡುವಂತೆ ವಿಮುಕ್ತ ದೇವದಾಸಿಯರು ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರದ ತಹಸಿಲ್ ಕಚೇರಿ ಎದುರು ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕವಿತಾ.ಆರ್. ಅವರಿಗೆ ಮನವಿ ಸಲ್ಲಿಸಿದರು.

ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಜಿಲ್ಲಾ ಸಂಚಾಲಕಿ ನಾಗರತ್ನಾ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ಮಾಜಿ ದೇವದಾಸಿಯರಿಗೆ ಯಾವುದೇ ಕೆಲಸ ಸಿಗದೆ ಜೀವನ ನಡೆಸುವುದು ಕಷ್ಟವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ವಿವಿಧ ಮಾಸಾಶನಗಳ ಹಣವನ್ನು ಹೆಚ್ಚಿಗೆ ಮಾಡಿದ್ದಾರೆ. ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅತಿ ಹಿಂದುಳಿದ, ಮೌಢ್ಯತೆಯಿಂದ ಕೂಡಿದ ದೇವದಾಸಿಯರನ್ನು ಮಾತ್ರ ಕೈಬಿಡಲಾಗಿದೆ. ದೇವದಾಸಿಯರ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಮಾಸಾಶನ ನೀಡಿದಲ್ಲಿ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net