

ಮಸ್ಕಿ: ಪಟ್ಟಣದಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಈದ್-ಉಲ್-ಫಿತ್ರ್ ಸಂಭ್ರಮದಿಂದ ಸೋಮವಾರ ಆಚರಿಸಿದರು.
ಸಾವಿರಾರು ಮುಸ್ಲಿಮರು ಮುಫ್ತಿ ಆಸಿಫ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಸಮಿತಿ ಅಧ್ಯಕ್ಷ ಜಿಲಾನಿ ಖಾಜಿ ಈದ್ಗಾ ಅಭಿವೃದ್ಧಿ ಕಾಮಗಾರಿ ಲೆಕ್ಕಪತ್ರ ನೀಡಿದರು.
ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಿಂದ ಈದ್ಗಾ ಮೈದಾನ ಆಧುನೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕೆಲ ತಿಂಗಳ ಹಿಂದೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು, 15 ಲಕ್ಷ ರೂ. ಅನುದಾನ ಕೊಡಿಸಿದ್ದರು. ಅದರಲ್ಲಿ ಕೇವಲ 5 ಲಕ್ಷ ರೂ. ಈದ್ಗಾ ಖಾತೆಗೆ ಜಮಾ ಆಗಿದೆ. ಈದ್ಗಾ ಅಭಿವೃದ್ಧಿಗೆ ಇನ್ನೂ 50 ಲಕ್ಷ ರೂ. ವೆಚ್ಚವಾಗಲಿದೆ. ಸಮಾಜದ ಬಾಂಧವರು ಹೆಚ್ಚಿನ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಈದ್ಗಾ ಸಮಿತಿಗೆ 53 ಸಾವಿರ ರೂ.ದೇಣಿಗೆ ಸಂಗ್ರಹವಾಯಿತು.
ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಮಹ್ಮದ್‌ಸಾಬ್ ಮಕಾನದಾರ್, ಪ್ರಮುಖರಾದ ರಿಯಾಜ್ ಖಾಜಿ, ಅಬ್ದುಲ್ ಗನಿ, ಚಾಂದ್‌ಶೇಡ್ಮಿ, ಆರ್.ಸಿ.ನದ್ಾ, ಶಬ್ಬೀರ್ ಚೌದ್ರಿ, ಬಾಹರಲಿ, ಗೌಸ್ ಟೈಲರ್, ರಜಾಕ್ ಕರೋಡಗಿರಿ, ಉಸ್ಮಾನ್ ಖಾಜಿ, ಮಸೂದ್ ಪಾಷಾ, ಅಜ್ಮೀರ್‌ಸಾಬ ಹಾಗೂ ಇತರರಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಮರು ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ಮುದ್ದುರಂಗಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.