ಹಕ್ಕುಗಳು ಪಡೆಯಲು ಜಾಗೃತರಾಗಿ

12
ಮಸ್ಕಿ ತಾಲೂಕಿನ ಇರಕಲ್ ಗ್ರಾಮದಲ್ಲಿ 91ನೇ ಮನೆ ಮನೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಭಾವಚಿತ್ರ ವಿತರಿಸಲಾಯಿತು. ಸಾಹಿತಿ ಸಿ.ದಾನಪ್ಪ ನಿಲೋಗಲ್, ಪ್ರಮುಖರಾದ ಜೆ.ಶರಣಪ್ಪ ಬಲ್ಲಟಗಿ, ಎಂ.ಆರ್.ಭೇರಿ, ಹುಸೇನಪ್ಪ ಇರಕಲ್, ಮೌನೇಶ ತುಗ್ಗಲದಿನ್ನಿ , ಶಿವಮ್ಮ, ಹನುಮಂತಿ, ಯಲ್ಲಮ್ಮ, ಮಾನಮ್ಮ ಇತರರಿದ್ದರು.
Published on

ಮಸ್ಕಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಪ್ರತಿಯೊಬ್ಬರೂ ಮನೆ-ಮನಗಳಲ್ಲಿ ತುಂಬಿಕೊಳ್ಳಲಿ ಎಂದು ಸಾಹಿತಿ ಸಿ.ದಾನಪ್ಪ ನಿಲೋಗಲ್ ಹೇಳಿದರು.

ಇರಕಲ್ ಗ್ರಾಮದ ಅಮರಮ್ಮ- ಆದೆಪ್ಪ ಛಲವಾದಿ ಮನೆಯಲ್ಲಿ ಬಹುಜನ ಸಂಘಷರ್ ಸಮಿತಿ ಮಂಗಳವಾರ ಆಯೋಜಿಸಿದ್ದ 91ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೋಷಿತರು, ದಲಿತರು ಜಾಗೃತರಾಗಿ ಹಕ್ಕುಗಳನ್ನು ಪಡೆಯಲು ಬಾಬಾಸಾಹೇಬರ ಆಶಯ ಆಧಾರವಾಗಿದೆ ಎಂದರು.

ಬಾಲಸ್ವಾಮಿ ದಿದ್ದಗಿ ಮಾತನಾಡಿ, ವಿದೇಶದಲ್ಲಿ ಡಾಕ್ಟರೇಟ್ ಪದವಿ ಪಡೆದ ಭಾರತ ದೇಶದ ಮೊದಲಿಗರು ಅಂಬೇಡ್ಕರ್. ಅವರು ಶೋಷಿತರಿಗೆ, ದಲಿತರಿಗೆ ಹಾಗೂ ಮಹಿಳೆಯರಿಗೆ ಶ್ರೇಷ್ಠವಾಗಿ ಬದುಕಲು ಅವಕಾಶ ನೀಡಿದವರು. ಅಂಬೇಡ್ಕರ್ ಅವರನ್ನು ಸದಾಕಾಲ ಸ್ಮರಿಸಬೇಕು ಎಂದರು.

ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಹಾಗೂ ಹಿರಿಯ ಹೋರಾಟಗಾರ ಎಂ.ಆರ್.ಭೇರಿ ಮಾತನಾಡಿದರು. ಹುಸೇನಪ್ಪ ಇರಕಲ್ ಅಧ್ಯಕ್ಷತೆ ವಹಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾಧ್ಯಕ್ಷ ಮೌನೇಶ ತುಗ್ಗಲದಿನ್ನಿ, ಗ್ರಾಪಂ ಸದಸ್ಯರಾದ ಸೋಮಪ್ಪ ಛಲವಾದಿ, ಛಲವಾದಿ ಮಹಾಸಭಾ ತಾಲೂಕಾ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ ವಟಗಲ್, ಪ್ರಮುಖರಾದ ಸೋಮನಾಥ ನಾಯಕ ಬಲ್ಲಟಗಿ, ಶಿವಮ್ಮ, ಹನುಮಂತಿ, ಯಲ್ಲಮ್ಮ, ಮಾನಮ್ಮ ಇರಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net