ಕಾಂಗ್ರೆಸ್ ಸೇರಿದ ಬಸನಗೌಡ ತುರುವಿಹಾಳಗೆ ವಸತಿ ಸಚಿವ ವಿ.ಸೋಮಣ್ಣ ಕಿವಿಮಾತು

18112020 V Somanna-Basanagowda Turvihal
Published on

ಮಸ್ಕಿ: ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಪಕ್ಷ ಬಿಡುವ ನಿರ್ಧಾರ ಮಾಡಿದ್ದು ತಪ್ಪು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಚುನಾವಣೆ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಬಸನಗೌಡರನ್ನು ಯಡಿಯೂರಪ್ಪ ತುಂಗಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಸಿಕ್ಕ ಅಧಿಕಾರ ಬಳಸಿಕೊಳ್ಳುವದನ್ನು ಬಿಟ್ಟು ಪಕ್ಷ ಬಿಡುವ ನಿರ್ಧಾರ ಸರಿಯಲ್ಲ. ಕಾಂಗ್ರೆಸ್ ಈಗಾಗಲೇ ಒಡೆದ ಮನೆಯಾಗಿದೆ. ಅಲ್ಲಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿನಾಶದ ಅಂಚಿನಲ್ಲಿದ್ದಾಗ ಬಸನಗೌಡ ತುರ್ವಿಹಾಳ ಅಲ್ಲಿಗೆ ಹೋಗಿ ಪಶ್ಚಾತಾಪ ಪಡುತ್ತಾರೆ. ಇನ್ನೊಮ್ಮೆ ವಿಚಾರ ಮಾಡಿ ಎಂದು ಬಸನಗೌಡ ತುರುವಿಹಾಳಗೆ ಸೋಮಣ್ಣ ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net