ಸಾಲ ವಿತರಣೆಯಿಂದ ಕೃಷಿಗೆ ಅನುಕೂಲ

151122 Maski Co-Operation Week
ಮಸ್ಕಿಯ ರೈತರ ಸೇವಾ ಸಹಕಾರ ಸಂಘದಲ್ಲಿ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿದರು.
Published on

ಮಸ್ಕಿ: ಪಟ್ಟಣದ ವಿವಿಧ ಸಹಕಾರಿ ಸಂಘಗಳಲ್ಲಿ ಸೋಮವಾರ 69ನೇ ಸಹಕಾರಿ ಸಪ್ತಾಹ ಆಚರಿಸಲಾಯಿತು. ರೈತರ ಸೇವಾ ಸಹಕಾರ ಸಂಘದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಬಸನಗೌಡ ಪೊಲೀಸ ಪಾಟೀಲ, ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ ಸಕಾಲಕ್ಕೆ ಸಾಲ ಒದಗಿಸುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಸಿಇಒ ಬಿ.ಜಿ.ನಾಯಕ ಮಾತನಾಡಿ, ಮಸ್ಕಿಯ ಸಹಕಾರಿಯಲ್ಲಿ ರೈತರ ಹಿತ ಕಾಪಾಡುವುದಕ್ಕಾಗಿ ಮೊದಲ ಆಧ್ಯತೆಯಾಗಿ ಸಾಲ ವಿತರಣೆ ಮಾಡುತ್ತೇವೆ ಎಂದರು.

ರಾಮಲಿಂಗೇಶ್ವರ ಸೌಹಾರ್ದ ಸಹಕಾರಿಯಲ್ಲಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಸಿಇಒ ಸೋಮನಾಥ ಹಾಗೂ ನಿರ್ದೆಶಕರು ಇದ್ದರು.

ಶರಣ ಬಸವೇಶ್ವರ ಸಹಕಾರಿಯಲ್ಲಿ ಅಂದಾನಪ್ಪ ಗುಂಡಳ್ಳಿ, ಭ್ರಮರಾಂಬ ಸಹಕಾರಿಯಲ್ಲಿ ಸಹಕಾರಿಯ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ ಧ್ವಜಾರೋಹಣ ನೆರವೇರಿಸಿದರು. ಸಿದ್ದಗಂಗಾ ಸಹಕಾರಿ, ಗವಿಸಿದ್ದೇಶ್ವರ ಸಹಕಾರಿ, ಹಾಲಾಪುರ ಸಹಕಾರಿ, ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಸಹಕಾರ ಸಪ್ತಾಹ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net