ಬಿಜೆಪಿ ಪ್ರಗತಿ ರಥಕ್ಕೆ ಸ್ವಾಗತ

27-msk-3
Published on

ಮಸ್ಕಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆ ತಿಳಿಸುವ ಬಿಜೆಪಿ ಪ್ರಗತಿ ರಥವನ್ನು ಪಕ್ಷದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು.

ಹಳೇ ಬಸ್‌ನಿಲ್ದಾಣ ಬಳಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ರಥವನ್ನು ಸ್ವಾಗತಿಸಿಕೊಂಡರು. ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ಮಾಡಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಇದನ್ನು ಮನೆ-ಮನೆಗೂ ತಲುಪಿಸುವ ಉದ್ದೇಶದಿಂದ ಪ್ರಗತಿ ರಥಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ನಂತರ ರಥವು ಸಿಂಧನೂರಿಗೆ ತೆರಳಿತು.

ಬಿಜೆಪಿ ಹಿರಿಯ ಮುಖಂಡ ಮಹಾದೇವಪ್ಪ ಗೌಡ ಪಾಟೀಲ, ಶರಣಬಸವ ಉಮಾಲೂಟಿ, ಪ್ರಸನ್ನ ಪಾಟೀಲ್, ಅಭಿಜಿತ್ ಮಾಲಿ ಪಾಟೀಲ್, ಚೇತನ್ ಪಾಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಾದವ್, ಶರಣಯ್ಯ ಸೊಪ್ಪಿಮಠ, ಶರಣಯ್ಯ ಗುಡದೂರು, ಮೌನೇಶ ನಾಯಕ, ವಿಸ್ತಾರಕರಾದ ಸಂಗಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net