ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು, ಬಣ್ಣ ಎರಚಿ ಸಂಭ್ರಮಾಚರಣೆ

Sindhanuru Election Result Congress Celebration
ತುರ್ವಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರು ಭರ್ಜರಿ ಗೆಲುವು ಸಾಧಿಸಿದ್ದರಿಂದ ಕಾರ್ಯಕರ್ತರು ಬಣ್ಣ ಹಾಕಿಕೊಂಡು ವಿಜಯೋತ್ಸವ ಆಚರಿಸಿದರು.
Published on

ಸಿಂಧನೂರು: ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳರು 30606 ಮತಗಳ ಅಂತರ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು. ರಾಯಚೂರಿನಲ್ಲಿ ನಡೆದ ಮತ ಏಣಿಕೆಯಲ್ಲಿ 12 ಸುತ್ತಿನಲ್ಲಿಯೇ ಗೆಲುವಿನ ಮೂನ್ಸೂಚನೆ ಅರಿತ ತಾಲೂಕಿನ ತುರ್ವಿಹಾಳ ಪಟ್ಟಣ, ಕಲಮಂಗಿ, ಕುರುಕುಂದ, ತಿಡಿಗೋಳ, ಉಪ್ಪಲದೊಡ್ಡಿ, ಹತ್ತಿಗುಡ್ಡ, ಉಮಲೂಟಿ, ಗುಂಜಳ್ಳಿ, ಬಪ್ಪೂರ, ಗುಂಡ, ಭೋಗಾಪುರ, ಚಿಕ್ಕಬೇರ‌್ಗಿ, ಹಿರೇಬೇರ‌್ಗಿ, ಹಂಪನಾಳ ಸೇರಿ ವಿವಿಧೆಡೆ ಕಾರ್ಯಕರ್ತರು ಕರೊನಾ ಮಹಾಮಾರಿ ಮಧ್ಯೆಯೂ ಬಣ್ಣ ಹಾಕಿಕೊಂಡು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತುರ್ವಿಹಾಳ ಪಟ್ಟಣ, ಕುರುಕುಂದ ಸೇರಿದ ಇತರ ಕಡೆಗಳಲ್ಲಿ ಯುವಕರು ಬೈಕ್ ರ‌್ಯಾಲಿ ನಡೆಸಿ ಹರ್ಷ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಭತ್ತದ ರಾಶಿಗಳು ನಡೆಯುತ್ತಿರುವುದರಿಂದ ಹಲವರು ಭತ್ತದ ರಾಶಿ(ಕಣ)ದಲ್ಲಿಯೇ ಆರ್.ಬಸನಗೌಡ ತುರ್ವಿಹಾಳ ಗೆಲುವಿನ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net