ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ

11092022 maski bjp office narayanaguru jayanti
Published on

ಮಸ್ಕಿ: ಶೋಷಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಜೀವನ ಮುಡುಪಾಗಿಟ್ಟಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಹಾಗೂ ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕರೆ ನೀಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಒಬಿಸಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾರಾಯಣ ಗುರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಪರಿವರ್ತನೆಯ ಹರಿಕಾರರಾಗಿದ್ದರು ಎಂದರು.

ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಹಿಂದುಳಿದ ಮೋರ್ಚಾ ಮಂಡಲ ಅಧ್ಯಕ್ಷ ಬಸವರಾಜ ಪಾಟೀಲ್, ಪ್ರಮುಖರಾದ ಪ್ರಸನ್ನ ಪಾಟೀಲ್, ಗಣೇಶ್ , ಮಲ್ಲಯ್ಯ, ಬಸವರಾಜ್ ಕಡುಬೂರು, ನಾಗರಾಜ ಯಂಬಲದ, ಈಡಿಗ ಸಮುದಾಯದ ಅಶೋಕ್ ಗುತ್ತೇದಾರ್, ಗುರುರಾಜ ಗುತ್ತೇದಾರ್, ಹನುಮಂತಪ್ಪ ಗುತ್ತೇದಾರ, ಶರಣಪ್ಪ, ಬಸವರಾಜ್ ಮಲ್ಕಾಪುರ್, ಬಸವರಾಜ್ ಬುದ್ದಿನ್ನಿ, ಮಾರುತಿ ಗುತ್ತೇದಾರ್, ಮೌನೇಶ್ ಬುದ್ದಿನ್ನಿ ಇತರರು ಇದ್ದರು.
ವಿವಿಧೆಡೆ ಆಚರಣೆ : ಶಾಸಕರ ಕಚೇರಿಯಲ್ಲಿ ಆಪ್ತ ಸಹಾಯಕ ಶರಣಗೌಡ ಪಾಟೀಲ್ ನಾರಾಯಣ ಗುರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಹಸೀಲ್ದಾರ್ ಕಚೇರಿ, ತಾಪಂ, ಪುರಸಭೆ ಹಾಗೂ ಇತರ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net