ಭಕ್ತರ ಆಶಯದಂತೆ ಮಠದ ಕಾರ್ಯ

UNTILETED 01
Published on

ಮಸ್ಕಿ: ಉಟಕನೂರಿನ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಯ ಜ್ಯೋತಿ ರಥಯಾತ್ರೆ ಕರ್ನಾಟಕ ಮತ್ತು ಆಂಧ್ರಪ್ರದೇಶ 565 ಗ್ರಾಮಗಳಲ್ಲಿ ಸಂಚರಿಸಿ ಬಸವಲಿಂಗ ಶಿವಯೋಗಿಗಳ ಮೂರ್ತಿ ದರ್ಶನ ಭಾಗ್ಯ ಕರುಣಿಸಿದೆ ಎಂದು ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ಮರಿಬಸವಲಿಂಗ ಶಿವಯೋಗಿಗಳ ಗದ್ದುಗೆ ಪೂಜೆ ಸಲ್ಲಿಸಿ ಮಾತನಾಡಿದರು. ಪಟ್ಟಾಧಿಕಾರ ನಿಮಿತ್ತವಾಗಿ ಗ್ರಾಮಗಳಿಗೆ ಸಂಚರಿಸಿ ಭಕ್ತರ ಸಲಹೆ ಸ್ವೀಕರಿಸಿ ಮಠವನ್ನು ಮುನ್ನಡೆಸುವ ಸಂಕಲ್ಪ ಮಾಡಲಾಗಿದೆ. ಮಠದ ಸಮಸ್ತ ಭಕ್ತರ ಆಶಯದಂತೆ ಶ್ರೀಮಠವನ್ನು ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮರಿಬಸವಲಿಂಗ ಸ್ವಾಮಿಗಳು ಬಾಲ ಲೀಲೆಗಳನ್ನು ಮಾಡಿದ ಪುಣ್ಯಾತ್ಮರು. ಬಸವಲಿಂಗ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವಕ್ಕೆ ಭಕ್ತರು ಕೈ ಜೋಡಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ್ ಬಸವರಾಜಪ್ಪಗೌಡ ಹಾರ್ವಪುರ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net