ಹಜರತ್ ಮೈಬೂಬು ಸುಭಾನಿ ಉರುಸ್ ಅದ್ದೂರಿ

Manavi urs
ಬಳಗಾನೂರಿನಲ್ಲಿ ಹಜರತ್ ಮೈಬೂಬು ಸುಭಾನಿ ಉರುಸ್ ಅಂಗವಾಗಿ ಗಂಧದ ಮೆರವಣಿಗೆ ಜರುಗಿತು. ದೇವದುರ್ಗದ ಎಚ್‌ಡಿಪಿ ದರ್ಗಾದ ಸೈಯದ್ ಜಹೀರಾಪಾಷಾ ಖಾದ್ರಿ ತಾತ, ಗೋನವಾರದ ಗಫೂರಸಾಬ್ ತಾತ ಇತರರಿದ್ದರು.
Published on

ಮಸ್ಕಿ: ಬಳಗಾನೂರು ಪಟ್ಟಣದ ಹಜರತ್ ಮೈಬೂಬು ಸುಭಾನಿ ದರ್ಗಾದ ಉರುಸ್ ಭಾನುವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಮೈಬೂಸಾಬ್ ಮನೆಯಿಂದ ಆರಂಭವಾದ ಗಂಧದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರ್ಗಾ ಸೇರಿತು.

ನಂತರ ಭಕ್ತರಿಂದ ದರ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಸಕ್ಕರೆ ನೈವೇದ್ಯ ಸಮರ್ಪಣೆ, ದೀರ್ಘದಂಡ ನಮಸ್ಕಾರ, ಉರುಳು ಸೇವೆ ಮಾಡಲಾಯಿತು. ಮಕ್ಕಳ ಜವಳ, ಮಕ್ಕಳ ತೂಕದ ಸಕ್ಕರೆ ಅರ್ಪಿಸಿದರು. ಮೈಬೂಬು ಸುಭಾನಿ ತಾತ ಭಕ್ತರಿಗೆ ಉತ್ತತ್ತಿ, ಕಲ್ಲು ಸಕ್ಕರೆ ನೀಡಿ ಆಶೀರ್ವದಿಸಿದರು. ದೇವದುರ್ಗದ ಎಚ್‌ಡಿಪಿ ದರ್ಗಾದ ಸೈಯದ್ ಜಹೀರಾಪಾಷಾ ಖಾದ್ರಿ ತಾತ, ಗೋನವಾರದ ಗಫೂರಸಾಬ್ ತಾತ ಹಾಗೂ ಭಕ್ತರು ಭಾಗವಹಿಸಿದ್ದರು.

ಬಳಗಾನೂರಿನಲ್ಲಿ ಹಜರತ್ ಮೈಬೂಬು ಸುಭಾನಿ ಉರುಸ್ ಅಂಗವಾಗಿ ಗಂಧದ ಮೆರವಣಿಗೆ ಜರುಗಿತು. ದೇವದುರ್ಗದ ಎಚ್‌ಡಿಪಿ ದರ್ಗಾದ ಸೈಯದ್ ಜಹೀರಾಪಾಷಾ ಖಾದ್ರಿ ತಾತ, ಗೋನವಾರದ ಗಫೂರಸಾಬ್ ತಾತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net