ಮಸ್ಕಿ: ಬಳಗಾನೂರು ಪಟ್ಟಣದ ಸಂತೆ ಮೈದಾನದಲ್ಲಿ ಏ.17ರಂದು ಡಾ.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯಿಂದ ಮಹಾನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬಳಗಾನೂರು ಪೊಲೀಸ್ ಠಾಣೆ ಮುಂಭಾಗದ ವೃತ್ತದಿಂದ ಸಂತೆ ಮೈದಾನದವರೆಗೆ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸುವರು. ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ, ಆರ್‌ಸಿಎಫ್ ರಾಜ್ಯ ಮುಖಂಡ ಎಂ.ಗಂಗಾಧರ, ಸಾಹಿತಿ ಸಿ.ದಾನಪ್ಪ, ಪ್ರಮುಖರಾದ ಶಿವಕುಮಾರ ನಾಯಕ ಬಳಗಾನೂರು, ಸಿದ್ದನಗೌಡ ಬಂಗ್ಲಿ, ನಿಂಗಪ್ಪ ಪೂಜಾರಿ, ಶೇಖರಗೌಡ ಮಾಲಿಪಾಟೀಲ್, ಮೌನೇಶಗೌಡ ಗದ್ದಿ, ಸಂಜಯ ಶೇಠ, ರಾಮಣ್ಣ ವಕೀಲರು, ಮಹಾಂತೇಶ ಜಾಲವಾಡಗಿ, ಬಿ.ತಿಕ್ಕಯ್ಯ, ಸಂತೋಷ ಹಿರೇದಿನ್ನಿ, ಮೌನೇಶ ಜಾಲವಾಡಗಿ, ರತ್ನಮ್ಮ ಕಟ್ಟಿಮನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಸಿ.ದಾನಪ್ಪ, ಮಲ್ಲಣ್ಣ ಬಳಗಾನೂರು, ರಮೇಶ ಕೊಲುಮಿ, ರಾಘವೇಂದ್ರ ಬಾಗಲವಾಡ ಇದ್ದರು.