

ಮಸ್ಕಿ: ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪಟ್ಟಣದಲ್ಲಿ ಗುರುವಾರ ರಾತ್ರಿ ಸ್ವಾಗತಿಸಲಾಯಿತು.
ತಹಸೀಲ್ದಾರ್ ಡಾ.ಮಲ್ಲಪ್ಪ.ಕೆ. ಮಾತನಾಡಿ, ನಾಡು, ನುಡಿ ಜಲ ಉಳಿಸುವಲ್ಲಿ ಪ್ರತಿಯೊಬ್ಬರು ಕಟಿಬದ್ಧರಾಗಿ ನಿಲ್ಲಬೇಕು ಎಂದರು. ನಂತರ ಕನ್ನಡ ಜ್ಯೋತಿ ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಿಂಧನೂರಿಗೆ ಬೀಳ್ಕೊಡಲಾಯಿತು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಮಹಾಂತೇಶ ಬ್ಯಾಳಿ, ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ತಾಪಂ ಇಒ ಅಮರೇಶ್ ಯಾದವ್, ಪಿಎಸ್‌ಐ ಮುದ್ದು ರಂಗಸ್ವಾಮಿ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಸ್ವಾಮಿ, ಮಹೇಶ ಶಟ್ಟರ್, ಪರಶುರಾಮ್ ಕೋಡಗುಂಟಿ, ಮೌನೇಶ್ ನಾಯಕ್, ಕರವೇ ಅಧ್ಯಕ್ಷ ದುರ್ಗ ರಾಜ್ ವಟಗಲ್ ಆರ್.ಕೆ.ನಾಯಕ್, ಕಿರಣ್ ಮುರಾರಿ, ಸಿದ್ದು ಮುರಾರಿ, ವಿಜಯ ಬಡಿಗೇರ್ ಇತರರಿದ್ದರು.