ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ಹೋರಾಟ

25-msk-1
Published on

ಮಸ್ಕಿ: ರಾಯಚೂರಿನಲ್ಲಿ ಏಮ್ಸ್ ಸಂಸ್ಥೆ ಆರಂಭಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

ಪಟ್ಟಣದ ಭ್ರಮರಾಂಬ ದೇವಸ್ಥಾನದಿಂದ ಕನಕ ವೃತ್ತ, ಮುಖ್ಯ ಬಜಾರ, ಡಾ.ಖಲೀಲ್ ವೃತ್ತದ ಮೂಲಕ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ರಾಯಚೂರು ಏಮ್ಸ್ ಆರಂಭಿಸಲು ಅರ್ಹತೆ ಹೊಂದಿದ್ದು, ಜಿಲ್ಲೆಯ ಎಲ್ಲ ಮುಖಂಡರ, ಶಾಸಕರ, ಮಾಜಿ ಶಾಸಕರ ಬೆಂಬಲವಿದೆ. ಏಮ್ಸ್ ಗಾಗಿ ನಡೆಯುತ್ತಿರುವ ಧರಣಿ 501 ದಿನ ಪೂರೈಸಿದೆ. ಮುಂಬರುವ ದಿನಗಳಲ್ಲಿ ಹಳ್ಳಿಗಳಲ್ಲಿ ಹೋರಾಟ ನಡೆಸುವ ಮೂಲಕ ಏಮ್ಸ್ ಆರಂಭಕ್ಕೆ ಹೆಚ್ಚಿನ ಒತ್ತಡ ಹಾಕಲಾಗುವುದು ಎಂದರು.

ಮುಖಂಡ ಬಸವಂತರಾಯ ಕುರಿ ಮಾತನಾಡಿ, ರಾಯಚೂರಿನಲ್ಲಿ ಏಮ್ಸ್ ಆರಂಭಿಸಿದರೆ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಉಪ ತಹಸೀಲ್ದಾರ್ ವಿಜಯಕುಮಾರ ಸಜ್ಜನ್‌ಗೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಪ್ರಸಾದ ಕ್ಯಾತ್ನಟ್ಟಿ ಮನವಿ ಸಲ್ಲಿಸಿದರು. ಪ್ರಮುಖರಾದ ಶಿವಶಂಕ್ರಪ್ಪ ಹಳ್ಳಿ, ಪಂಪಣ್ಣ ಗುಂಡಳ್ಳಿ, ಎಂ.ಅಮರೇಶ, ಪ್ರಕಾಶ ದಾರಿವಾಲ, ಸಿದ್ಧಲಿಂಗಯ್ಯ ಗಚ್ಚಿನಮಠ, ಬಸ್ಸಪ್ಪ ಬ್ಯಾಳಿ, ಶಿವಕುಮಾರ ಕಡಾಮುಡಿಮಠ, ಅಭಿಜಿತ್ ಮಾಲಿ ಪಾಟೀಲ, ಬಸನಗೌಡ ಪೊಲೀಸ ಪಾಟೀಲ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಮೌನೇಶ ಮುರಾರಿ, ಸುರೇಶ ಹರಸೂರು, ಡಾ.ಶಿವರಾಜ ಇತ್ಲಿ, ಸೂಗಣ್ಣ ಬಾಳೇಕಾಯಿ, ಘನಮಠದಯ್ಯ ಸಾಲಿಮಠ, ಮಹಾಂತೇಶ ಬ್ಯಾಳಿ, ಬಿ.ಎಲ್.ಶೆಟ್ಟಿ, ಜಿ.ಅಮರೇಶ ಬ್ಯಾಳಿ, ಶರಣಯ್ಯ ಸೊಪ್ಪಿಮಠ, ನಾಗರಾಜ ಯಂಬಲದ, ಜಿ.ವೆಂಕಟೇಶ ನಾಯಕ, ಅಬ್ದುಲ್ ಗನಿ, ಬಾಹರ್ ಅಲಿ, ಮೌನೇಶ ನಾಯಕ, ಶಾಂತಮ್ಮ, ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net