606ನೇ ದಿನ ಪೂರೈಸಿದ 5 ಎ ನಾಲಾ ಯೋಜನೆ ಜಾರಿ ಹೋರಾಟ

200722 5A nala Pamanakallur Branch Canal Enforcement Struggle Committee
5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿ ಹೋರಾಟ ಸಮಿತಿಯ ಪ್ರಮುಖರು ಬುಧವಾರ ನಂಜಲದಿನ್ನಿ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದರು.
Published on

ಮಸ್ಕಿ: ಮಸ್ಕಿ: ನಾರಾಯಣಪುರ ಬಲದಂಡೆ 5(ಎ) ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸೋಮವಾರ 606ನೇ ದಿನ ಪೂರೈಸಿತು.

ಇದರ ಭಾಗವಾಗಿ ಹೋರಾಟ ಸಮಿತಿಯವರು ಕ್ಷೇತ್ರದ ಮೆದಕಿನಾಳ, ನಾಗರಬೆಂಚಿ, ನಂಜಲದಿನ್ನಿ ಗ್ರಾಮಗಳಿಗೆ ತೆರಳಿ ಬುಧವಾರ ರೈತರ ಜಾಗೃತಿ ಸಭೆಗಳನ್ನು ನೆಡಸಿದರು. ರಾಯಚೂರು-ಕೊಪ್ಪಳ ವಿಧಾನಸಭಾ ಪರಿಷತ್ ಸದಸ್ಯ ಶರಣಗೌಡ ಬಯ್ಯಪುರ ಮೇಲ್ಮನೆಯಲ್ಲಿ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಯೋಜನೆ ಜಾರಿಗೆ ವಿಧಾನಸಭೆಯಲ್ಲಿ ರೈತರಪರ ಧ್ವನಿಯೆತ್ತಿರುವುದನ್ನು ಮನವರಿಕೆ ಮಾಡಿದ ಹೋರಾಟಗಾರರು, ಹೋರಾಟ ಗಟ್ಟಿಗೊಳ್ಳುವಂತೆ ಒಗ್ಗಟ್ಟಾಗಲು ಗ್ರಾಮಸ್ಥರಿಗೆ ಮನವಿ ಮಾಡಿದರು.

ಪ್ರಮುಖರಾದ ಪಂಪಣ್ಣ ಪರಡ್ಡಿ ಹಂಪನಾಳ, ಈರಪ್ಪ ಹಂಚಿನಾಳ, ಮಲ್ಲರಡ್ಡೆಪ್ಪ ಚಿಲ್ಕರಾಗಿ, ಕುಶಪ್ಪ ಚಕೋಟಿ ಅಮೀನಗಡ, ಮಲ್ಲೇಶಗೌಡ ಮಾಲಿಪಾಟೀಲ ಚಿಲ್ಕರಾಗಿ, ಹುಚ್ಚಪ್ಪ ಅಮೀನಗಡ, ಮುದುಕಪ್ಪ ಸಜ್ಜನ್ ಅಮೀನಗಡ, ಹನುಮಂತ ಚೌಡಕಿ, ಶರಣಪ್ಪ ನಾಗರಬೆಂಚಿ, ಶರಣಪ್ಪ ಚಕೋಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net