

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್‌ನಲ್ಲಿರುವ ಸಿಬಿಟಿ ಬಸ್ ನಿಲ್ದಾಣ ಹೊಕ್ಕಿರುವ ಮುಸುಕುಧಾರಿಗಳಿಬ್ಬರು 50 ಸಾವಿರ ರೂ. ಮೌಲ್ಯದ ನೀರನ ವಾಲ್ವ್‌ಗಳನ್ನು ಕದ್ದು ಪರಾರಿಯಾಗಿದ್ದು, ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಫೆ. 18ರಂದು ಮಧ್ಯರಾತ್ರಿ ಹೊಕ್ಕಿರುವ ಇಬ್ಬರು, ತಮಗೆ ಸಿಕ್ಕಿ ನೀರನ ವಾಲ್ವ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು, ಶಹರ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೂ ಕಳ್ಳರ ಪತ್ತೆಯಾಗಿಲ್ಲ. ಕಳ್ಳರ ಪತ್ತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಂ. ತಹಸೀಲ್ದಾರ್ ನೇತೃತ್ವದ ತಂಡ ಬಲೆ ಬೀಸಿದೆ.