

PG: ಬೆಂಗಳೂರಿನ ಸುದ್ದಿಗುಂಟೆ ಪಾಳ್ಯದಲ್ಲಿರುವ ಮಹಿಳೆಯರ ಪಿಜಿವೊಂದರಲ್ಲಿ ಶುಕ್ರವಾರ ರಾತ್ರಿ ಸರಿಸುಮಾರು 3 ಗಂಟೆಗೆ ಮುಸುಕುಧಾರಿಯೊಬ್ಬ ಯುವತಿಯೊಬ್ಬಳು ಮಲಗಿರುವ ಕೋಣೆಗೆ ಪ್ರವೇಶಿಸಿ ಲೈಂಗಿಕ ದೌರ್ಜನ್ಯ ನಡೆಸಿ, ದರೋಡೆ ಮಾಡಿ ಪರಾರಿಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಸುಕುಧಾರಿಯೊಬ್ಬ ಸುದ್ದಿಗುಂಟೆ ಪಾಳ್ಯದಲ್ಲಿರುವ ಪೇಯಿಂಗ್ ಗೆಸ್ಟ್ ವೊಂದಕ್ಕೆ ಪ್ರವೇಶ ಮಾಡದ್ದು, ಅಲ್ಲಿರುವ ಕೋಣೆಯೊಂದರ ಒಳಗೆ ಹೋಗಿದ್ದಾನೆ. ಈ ವೇಳೆ ಮಲಗಿದ್ದ ಯುವತಿಯೊಬ್ಬಳಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಭಯಗೊಂಡ ಯುವತಿ ಎಚ್ಚರಗೊಂಡು ಕಿರುಚಲು ಪ್ರಾರಂಭಿಸಿದ್ದಾಳೆ. ಈ ವೇಳೆ ಮುಸುಕುಧಾರಿ ಚಾಕು ತೋರಿಸಿ ಹೆದರಿಸಿದ್ದು, ಸಹಾಯಕ್ಕಾಗಿ ಯಾರನ್ನಾದರೂ ಕೂಗಿದರೆ, ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಪಿಜಿ ಒಳಗೆ ನುಗ್ಗಿದ ವ್ಯಕ್ತಿಯು ಕೆಳಗೆ ಇರುವಂತಹ ಎಲ್ಲಾ ಕೋಣೆಯನ್ನು ಲಾಕ್ ಮಾಡಿ ಮೇಲೆ ಬಂದು ಒಂದು ರೂಮ್ನ್ನು ಪ್ರವೇಸಿದ್ದಾನೆ. ಈ ವೇಳೆ ಮಲಗಿರುವ ಯುವತಿಗೆ ಲೈಂಕಿಗ ದೌರ್ಜನ್ಯವೆಸಗಿದ್ದು, ಆಕೆಗೆ ಬೆದರಿಸಿ ಅವಳಲ್ಲಿದ್ದ 2,500 ರೂ ನಗದುವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಇನ್ನು ಆರೋಪಿ ಪತ್ತೆಗಾಗಿ ಹುಡಕಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)