ಅಣಬೆ ಬೇಸಾಯ ತರಬೇತಿ

Mashroom
Published on

ಬೆಂಗಳೂರು: ತೋಟಗಾರಿಕೆ ಇಲಾಖೆಯು ಬನ್ನೇರುಘಟ್ಟ ರಸ್ತೆಯ ಹುಳಿಮಾವು ಜೈವಿಕ ಕೇಂದ್ರದಲ್ಲಿ ಆ. 3ರಂದು ಅಣಬೆ ಬೇಸಾಯ ಬಗ್ಗೆ ನಗರವಾಸಿಗಳು, ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವರು ತರಬೇತಿಗೆ ಹಾಜರಾದ ಸಂದರ್ಭದಲ್ಲಿ 250 ರೂ.ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ವಿವರಗಳಿಗೆ ಮೊ: 9449833153, 9066764248, 7892618755 ಅಥವಾ ಇ-ಮೇಲ್: sadh.co23gmail.com ಅಥವಾ jaivikakendra.hulimavugmail.com ಮೂಲಕ ಸಂಪರ್ಕಿಸಬಹುದು ಎಂದು ತೋಟಗಾರಿಗೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net