ಭಕ್ತರ ಮದ್ಯ ಚೂಲು ಬಿಡಿಸಿದ ದೇವಿ

1748780128136
Published on
ಕರಜಗಿ: (ಅಫಜಲಪುರ):  ಕರಜಗಿ ವಲಯದ ಮಾಶಾಳ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರೋತ್ಸವ ನಿಮಿತ್ಯ ಭಾನುವಾರ ಶೂಲ ಬಿಡಿಸುವ ಉಸ್ತವ ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಅಲಂಕಾರ ಅಭಿಷೇಕ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಕುಣಿಯುತ್ತೂಲಾಗಿಡಿಸುವ ಅಂಕದ ಗೌಡ ಶೂಲದ ಮೇಲೆ ಹಾಸಿನಗಿರುತ್ತಾರೆ.
ವರ್ಷಪೂರ್ತಿ ದೇವಿಯ ಮುಖವನ್ನು ಮುಚ್ಚಲಾಗಿರುತ್ತದೆ ಪ್ರತಿ ವರ್ಷ ಬಾದಾಮಿ ಅಮವಾಸೆಯ ಮುನ್ನಾದಿನ ಚತುರ್ದರ್ಶಿ ಎಂದು ದೇವಿಯ ಮುಖವನ್ನು ಸಾವಿರ ಜನಿಕರ ದರ್ಶನಕ್ಕೆ ತೆರೆಯಲಾಗುತ್ತದೆ, ದೇವಿ ದೇವಿಗೆ ಭಕ್ತರು ದಂಡೆ ಬಾಸಿಂಗ ಗೆಜ್ಜೆ ತಾಳಿ ಸೀರೆ ಉಡಕ್ಕೆ ಅರ್ಪಿಸಿ ಕುಡಿ ತುಂಬ ಮೂಲಕ ತಮ್ಮ ಹರಕೆ ತೀರಿಸುವವರು 9 ದಿನ ದೂರ ಉತ್ಸವ ನಡೆಯಿತು.
ಜೂ.2 ರಂದು ಶ್ರೀ ಚೌಡೇಶ್ವರಿ ದೇವಿಯ ಕಡೆಯ ಜಾತ್ರೆ ಮುಗಿಯುವದು, ನಂತರ ಮಂಗಳಾರತಿಯೊಂದಿಗೆ ಜಾತ್ರೆ ಮಂಗಲಗೊಳ್ಳುವದು. ರಾತ್ರಿ 9 ಗಂಟೆಯಿಂದ ಒಂದು ಗಂಟೆಯವರೆಗೆ ಅಣುಕಿನ ಆಟ ಸೋಡಂಬಿ ನಡೆಯುವುದು. ದಿನಾಂಕ್ 3 ರಂದು ಮಂಗಳವಾರ ಜಂಗಿ ಪೈಲ್ವಾನರಿಂದ ಕುಸ್ತಿಗಳು ಜರುಗುವವು, ದಿನಾಂಕ 9 ರಂದು ಸೋಮವಾರ ಹೊನ್ನ ಹುಗ್ಗಿ ರಾತ್ರಿ ಶ್ರೀ ಚೌಡೇಶ್ವರಿ ದೇವಿಯ ಮುಖ ಮುಚ್ಚುವುದು, ದಿನಾಂಕ 10 ರಂದು ಮಂಗಳವಾರ ಕಾರ ಹುಣ್ಣಿಮೆ  ಇರುವದು. ಗ್ರಾಮದಲ್ಲೇ ಸಂಭ್ರಮದಿಂದ ಕಾರು ಹುಣ್ಣಿಮೆ ಆಚರಿಸಲಾಗುತ್ತದೆ.
ಪ್ರಮುಖರಾದ ಧೂಳಪ್ಪ ರಜಾ, ಶಿವಣ್ಣ ಪಾರುಗೊಂಡ, ವಿಶ್ವನಾಥ್  ರೆವುರ, ಶಿವರುದ್ರಪ್ಪ ಅವಟಗಿ, ಅಣ್ಣರಾವ್ ಪ್ರಧಾನಿ, ಕಾಶಿನಾಥ್ ಕುಂಬಾರ್, ಶಂಕರ್ ಅಲೆಗಾವ್, ವಿಜಯಕುಮಾರ ಪ್ರಧಾನಿ, ವಸಂತ ರಾಯ ಚಲ್ಗೇರಿ, ಶಿವಪ್ಪ ಪಾರಗೊಂಡ, ಶಂಕರ್ ಕುಲಕರ್ಣಿ, ಶಂಕರ್ ಮುಸಲಗಿ, ಸುಭಾಷ್ ಕಾಸರ್, ರಾಜಕುಮಾರ್ ಬಬ್ಲಾದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net