ಹೊಸಪೇಟೆಯಲ್ಲಿ ಮಸಣ ಕಾರ್ಮಿಕರ ಪ್ರತಿಭಟನೆ

WhatsApp Image 2023-08-14 at 3.29.17 PM
Published on

ಮಾಸಿಕ ಮೂರು ಸಾವಿರ ರೂ. ಪ್ರೋತ್ಸಾಹ ಧನಕ್ಕೆ ಆಗ್ರಹ

ಹೊಸಪೇಟೆ: ಮಸಣ ಕಾರ್ಮಿಕರ ಸೇವೆಯನ್ನು ಎನ್‌ಆರ್‌ಇಜಿಯಲ್ಲಿ ಸೇರಿಸಬೇಕು. ಮಾಸಿಕ ಕನಿಷ್ಠ ೩ ಸಾವಿರ ರೂ. ಸಹಾಯಧನ ನಿಗದಿಗೊಳಿಸಬೇಕು ಎಂಬುದು ಮತ್ತಿತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಮಸಣ ಕಾರ್ಮಿ ಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಸಾಯಿ ಬಾಬಾ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಹಲವು ವರ್ಷಗಳಿಂದ ರಾಜ್ಯದ ಎಲ್ಲ ಗ್ರಾಮ ಮತ್ತು ನಗರದಲ್ಲಿ ಲಕ್ಷಾಂತರ ಕುಟುಂಬಗಳ ಜನರು ಮಸಣ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೃತರ ಸಂಬAಧಿಕರು ನೀಡುವ ಹಣವನ್ನೇ ಕೂಲಿಯನ್ನಾಗಿ ಸ್ವೀಕರಿಸುತ್ತೇವೆ. ಕೆಲ ವಾರಸುದಾರರಿಲ್ಲ ಶವಗಳನ್ನೂ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸುತ್ತೇವೆ. ಜತೆಗೆ ಇಡೀ ಸ್ಮಶಾನವನ್ನು ಸ್ವಚ್ಛಗೊಳಿಸಿ ನಂದನವನವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಆದರೆ, ಮೃತರ ಸಂಬAಧಿಕರು ನೀಡುವ ಹಣದಲ್ಲಿ ಜೀವನ ಜಿರ್ವಹಣೆ ಕಷ್ಟಕರವಾಗಿ ದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೋರಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು, ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಪ್ರತಿ ಸ್ಮಶಾನಕ್ಕೆ ಒಬ್ಬ ಮಸಣ ಕಾರ್ಮಿಕನನ್ನು ಆಯಾ ಸ್ಥಳೀಯ ಸಂಸ್ಥೆಗಳು ನೇಮಿಸಿಕೊಂಡು, ಮಾಸಿಕ ಕನಿಷ್ಟ ೩ ಸಾವಿರ ರೂ. ಕೂಲಿ ನೀಡಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸೇರ್ಪಡೆಗೊಳಿಸಿ, ಕೂಲಿ ಒದಗಿಸಬೇಕು. ಮಸಣ ಕಾರ್ಮಿಕರ ಕುಟುಂಬಗಳ ಸಮೀಕ್ಷೆ ಮಾಡಿ, ವಾಸಕ್ಕೆ ಮನೆ ಒದಗಿಸಬೇಕು. ಮಸಣ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ೪೫ ವರ್ಷ ಮೀರಿದವರಿಗೆ ಮಾಸಿಕ ೩ ಸಾವಿರ ರೂ. ಪಿಂಚಣಿ ನೀಡಬೇಕು.

ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ದಲಿತರು ಹಾಗೂ ಜನ ವಿರೋಧಿಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-೨೦೨೦, ಎಪಿಎಂಸಿ ತಿದ್ದುಪಡಿ ಕಾಯ್ದೆ-೨೦೨೦, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ, ಮತ್ತು ಕಾರ್ಮಿಕರ ತಿದ್ದುಪಡಿ ಕಾಯ್ದೆಗಳನ್ನು, ಹೊಸ ರಾಷ್ಟಿçÃಯ ಶಿಕ್ಷಣ ನೀತಿ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸು ಪಡೆಯಬೇಕು. ಬದಲಿಗೆ, ಎಲ್ಲಾ ಮಸಣ ಕಾರ್ಮಿಕರಿಗೆ ತಲಾ ಐದು ಎಕರೆ ಜಮೀನು ಉಚಿತವಾಗಿ ನೀಡಬೇಕು. ಅದೇ ರೀತಿ, ಹಿತ್ತಲು ಹಾಗೂ ನಿವೇಶನ ಸಹಿತ ೧೦ ಲಕ್ಷ ರೂ ಮೌಲ್ಯದ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಸಣ ಕಾರ್ಮಿಕರಿಗೆ ಕೋವಿಡ್ ವಿಮೆ ಜಾರಿಗೊಳಿಸಬೇಕು. ಅವರ ಕುಟುಂಬದ ಸದಸ್ಯರು ಹೈನುಗಾರಿಕೆ ಮತ್ತಿತರೆ ಉದ್ಯೋಗ ದಲ್ಲಿ ತೊಡಗಲು ಶೇ.೭೫ ರಷ್ಟು ಸಹಾಯಧನ ಮತ್ತು ಉಳಿದ ಮೊತ್ತಕ್ಕೆ ಕನಿಷ್ಟ ೫ ವರ್ಷ ಬಡ್ಡಿ ರಹಿತ ೫ ಲಕ್ಷ ರೂ. ಸಾಲ ಸೌಲಭ್ಯ ಒದಗಿಸಬೇಕು. ಮಸಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ೨೫ ವರ್ಷ ಮೀರಿದ ಮಕ್ಕಳಿಗೆ ಸರ್ಕಾರ ಉದ್ಯೋಗ ಒದಗಿಸಲಾಗದಿದ್ದಲ್ಲಿ ಮಾಸಿಕ ೧೦ ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಕಾಡು ಸೋಸುವ ಕೆಲಸಕ್ಕೆ ತಲಾ ೨,೫೦೦ ರೂ. ನಿಗದಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪ್ರಮುಖರಾದ ಆರ್.ಎಸ್.ಬಸವರಾಜ್, ಆರ್.ಭಾಸ್ಕರ್ ರೆಡ್ಡಿ, ಬಿ.ತಾಯಪ್ಪನಾಯಕ, ಚಂದ್ರಪ್ಪ ಕೂಡ್ಲಿಗಿ, ಸ್ವಾಮಿ ವಡ್ರಳ್ಳಿ, ತಿರುಪತಿ, ಪ್ರಕಾಶ್ ಸೇರಿದಂತೆ ನೂರಾರು ಜನ ಮಸಣ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net