

ಹನಗೋಡು: ಹೋಬಳಿಯ ಕೂಡ್ಲೂರಿನಲ್ಲಿ ಪ್ರಭು ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೂಡ್ಲೂರು ಗ್ರಾಮದ ಅಮಲೋದ್ಬವ ಮಾತೆ ದೇವಾಲಯದಲ್ಲಿ ಧರ್ಮಗುರು ಸ್ಟಾೃನ್ಲಿ ಅಲ್ಮೇಡಾ ಹಾಗೂ ಸಿಸ್ಟರ್ ನೇತೃತ್ವದಲ್ಲಿ 9 ದಿನಗಳ ಕಾಲ ಮಾತೆ ಮರಿಯಮ್ಮ ಅವರಿಗೆ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆ ಸಲ್ಲಿಸಲಾಗಿತ್ತು. ಮಂಗಳವಾರ ಸಂಜೆ ವಿದ್ಯುತ್ ದೀಪಾಲಂಕಾರಗಳಿಂದ ಕೂಡಿದ ಮಾತೆ ಮರಿಯಮ್ಮನವರ ತೇರನ್ನು ಮೆರವಣಿಗೆ ಮಾಡಲಾಯಿತು.
ತಾಲೂಕು ಕ್ರೈಸ್ತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಜಾಜ್, ಉಪದೇಶಿ ಜೇಮ್ಸ್, ಗ್ರಾ.ಪಂ. ಸದಸ್ಯರಾದ ಮಿಕೇಲಪ್ಪ , ಸ್ಮಿತಾ, ಮುಖಂಡರಾದ ಅರುಳಪ್ಪ, ಇನಾಸಪ್ಪ, ಎ.ಜೋಸೆಫ್ ಮರಿ, ಸಂತೋಷ್, ಅನಿಲ್, ಆನಂದ್, ರಾಜು, ಸೇರಿದಂತೆ ಸಲಹಾ ಸಮಿತಿ ಸದಸ್ಯರು ಹಾಗೂ ವಿಚಾರಣೆ ಸಭಾ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.