

ಅಂಕಲಗಿ: ಸಮೀಪದ ಸುಲಧಾಳ ಗ್ರಾಮ ಪಂಚಾಯಿತಿಗೆ ೪ ತಿಂಗಳ ಅವಧಿಗೆ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಾರುತಿ ಗೋಡಲಕುಂದರಗಿ ಹಾಗೂ ಉಪಾಧ್ಯಕ್ಷೆಯಾಗಿ ಸಿದ್ದವ್ವ ಬಿಚಗತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷ ಮಾರುತಿ ಗೋಡಲಕುಂದರಗಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲ ಸದಸ್ಯರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಶ್ರಮಿಸಲಾಗುವುದು ಎಂದರು.
ಶಾಸಕ ರಮೇಶ ಜಾರಕಿಹೊಳಿ ಆಪ್ತ ಸಹಾಯಕ ಭೀಮಗೌಡ ಪೊಲೀಸಗೌಡರ ಮಾತನಾಡಿ, ಗ್ರಾಮದ ಜನರ ಆಶೋತ್ತರಗಳಿಗೆ ಒತ್ತು ನೀಡಿ ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಮಾಡುತ್ತಿದ್ದು, ಅವಿರೋಧ ಆಯ್ಕೆಯಿಂದ ಸುಗಮ ಆಡಳಿತಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದರು.
ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಮಾಜಿ ಅಧ್ಯಕ್ಷ ಮಹಾಂತೇಶ ಬಿಚಗತ್ತಿ, ಉಪಾಧ್ಯಕ್ಷೆ ಕಲಾವತಿ ಸೋಮನಟ್ಟಿ, ಗ್ರಾಪಂ ಸದಸ್ಯರಾದ ಹಸೀನಾಬಿ ದೇಸಾಯಿ, ಮಂಜುಳಾ ಕುರಪಿ, ಮಹಾದೇವಿ ಕೊಳ್ಳಾನಟ್ಟಿ, ಗಣಪತಿ ಮರಾಠೆ, ಶಶಿಕಲಾ ಬಾಗೇವಾಡಿ, ಅರುಣ ಹಿರೇಮಠ, ಬಸವರಾಜ ರಾಯಣ್ಣವರ, ಬಸವಣ್ಣೆಪ್ಪ ಬೂದನವರ, ಮಾರುತಿ ಮುತ್ನಾಳ, ರೇಣುಕಾ ಮೀಸಿನಾಯಿಕ, ಸುಶೀಲವ್ವ ಕೆಂಪಣ್ಣವರ, ಗೌಡಪ್ಪ ತಳವಾರ, ಯಲ್ಲವ್ವ ತಳವಾರ, ಪಿಡಿಒ ಮಂಜುನಾಥ ಪಟ್ಟಣ, ಧುರೀಣರಾದ ರಾಜೇಂದ್ರ ಗೌಡಪ್ಪಗೋಳ, ಬಿ.ಬಿ.ಪಾಟೀಲ, ಗಂಗಪ್ಪ ಅಂಗಡಿ, ನಾಗಪ್ಪ ಮಾಳಗಿ, ದೊಡ್ಡಪ್ಪ ಸನದಿ, ರಾಮಣ್ಣ ಬಾಗೇವಾಡಿ, ಸಿದ್ದಪ್ಪ ಕೆಸರೂರ, ಕಲ್ಲಪ್ಪ ಪಾಟೀಲ, ಸಂಜು ಕೆಂಪಣ್ಣವರ, ಪರಶುರಾಮ ಬಡ್ಲೆಮ್ಮಗೋಳ, ಈಶ್ವರ ಮುತ್ನಾಳ ಇತರರಿದ್ದರು.