ಜನವರಿಯಿಂದ ಡಿಸೆಂಬರ್‌ವರೆಗೆ ಮಾರುತಿ ವಾಣಿಕ್ಯ ಮಹೋತ್ಸವ : ಜನಸೇವಾ ಸಂಘ ಪ್ರಧಾನ ಕಾರ್ಯದರ್ಶಿ ಕಪಿಲ್ ಬಂಗೇರ ಮಾಹಿತಿ

New Project (27)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ಮೊಗವೀರಪಟ್ಣದ  ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ 40ನೇ ವರ್ಷಾಚರಣೆಯನ್ನು ಮೂರು ಕೋಟಿ ರೂ.ಗೂ ಮಿಕ್ಕಿದ 40ಕ್ಕೂ ಹೆಚ್ಚು ಸವಾಜ ಕಾರ್ಯಗಳೊಂದಿಗೆ ಜನವರಿಯಿಂದ ಡಿಸೆಂಬರ್‌ವರೆಗೆ ಒಂದು ವರ್ಷ ಮಾರುತಿ ಮಾಣಿಕ್ಯ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾರುತಿ ಜನಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್.ಬಂಗೇರ ತಿಳಿಸಿದರು. ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ನಾಡೋಜ ಡಾ.ಜಿ.ಶಂಕರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಗೀತಾನಂದ ೌಂಡೇಷನ್‌ನ ಆನಂದ ಸಿ.ಕುಂದರ್ ಗೌರವ ವಾರ್ಗದರ್ಶನದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಸಲಹೆಯೊಂದಿಗೆ ನಾಲ್ಕು ದಶಕಗಳ ಸೇವಾಕಾರ್ಯದ ಆಚರಣೆ ‘ವಾರುತಿ ವಾಣಿಕ್ಯ ಮಹೋತ್ಸವ’ ಸೇವೆಯಲ್ಲಿ ಧನ್ಯತೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಆಚರಿಸಲಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿವಿಧ ಸಮಾಜ ಕಾರ್ಯಗಳನ್ನು ಆಯೋಜಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವಿಧ ಸಮಾಜಸೇವಾ ಕಾರ್ಯಕ್ರಮಗಳಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಕ್ತದಾನ, ವೈದ್ಯಕೀಯ ಶಿಬಿರ ಆಯೋಜಿಸಿದೆ. ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆ ಮತ್ತು ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾದ್ಯಂತ ವಾರುತಿ ವಾಣಿಕ್ಯ ಮಹೋತ್ಸವ ಅಭಿಯಾನ ಆಯೋಜಿಸಲಾಗಿದೆ ಎಂದವರು ಮಾಹಿತಿ ನೀಡಿದರು. ಸಮಾರೋಪ ಸಮಾರಂಭದ ಅಂಗವಾಗಿ ಡಿಸೆಂಬರ್ ತಿಂಗಳಲ್ಲಿ ಉಳ್ಳಾಲ ಬೀಚ್ ಫೆಸ್ಟ್ ಆಯೋಜಿಸಲು ತೀರ್ಮಾನಿಸಿದ್ದು, ಡ್ಯಾನ್ಸ್ ಫೆಸ್ಟಿವಲ್, ತಾರಾ ರಸಸಂಜೆ, ಬೀಚ್ ಪಂದ್ಯಾಟಗಳು, ಆಹಾರೋತ್ಸವ, ಗಾಳಿಪಟ ಸ್ಪರ್ಧೆ, ಮರಳಿನ ಚಿತ್ರ ರಚನೆ, ದೋಣಿ ಓಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದರು. ವಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್ ಮಾಹಿತಿ ನೀಡಿದರು. ಕೋಶಾಧಿಕಾರಿ ಅನಿಲ್ ಚರಣ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net