ಭಕ್ತಿ, ಶಕ್ತಿ, ಬುದ್ಧಿಯ ತ್ರಿವೇಣಿ ಸಂಗಮವೇ ಮಾರುತಿ

Maruti is the confluence of devotion, power, and intellect.
ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಹನುಮ ದೇವಸ್ಥಾನದ ನೂತನ ರಥಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಪೂಜೆ ಸಲ್ಲಿಸಿದರು. ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಚಿಮ್ಮಡ ಜನಾರ್ದನ ಮಹಾರಾಜರು, ಸಂಸದ ಪಿ.ಸಿ. ಗದ್ದಿಗೌಡರ ಇದ್ದಾರೆ.
Published on

ರಬಕವಿ/ಬನಹಟ್ಟಿ: ಭಕ್ತಿ, ಶಕ್ತಿ, ಬುದ್ಧಿಯ ತ್ರಿವೇಣಿ ಸಂಗಮವೇ ಮಾರುತಿ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.

ಸಮೀಪದ ಮದನಮಟ್ಟಿ ಗ್ರಾಮದ ಹನುಮಾನ ದೇವಸ್ಥಾನದ ನೂತನ ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬುದ್ಧಿವಂತರಲ್ಲಿ ಶ್ರೇಷ್ಠ ವ್ಯಕ್ತಿ ಹನುಮ. ಲಂಕೆಗೆ ಸೇತುವೆ ಕಟ್ಟುವ ಸಂದರ್ಭದಲ್ಲಿ ಹನುಮಂತ ಕಲ್ಲುಗಳ ಮೇಲೆ ಜೈ ಶ್ರೀರಾಮ ಎಂದು ಬರೆದರೆ ಅದು ನೀರಿನಲ್ಲಿ ತೇಲುತ್ತಿತ್ತು. ಇದನ್ನು ರಾಮ ಕಂಡು ಹನುಮನ ಭಕ್ತಿಯನ್ನು ಕೊಂಡಾಡಿದ್ದನು ಎಂದು ದೃಷ್ಟಾಂತವನ್ನು ವಿವರಿಸಿದರು.

ಗ್ರಾಮದ ಹನುಮನ ದೇವಸ್ಥಾನದ ಸುತ್ತಲೂ ನವಗ್ರಹ, ಆನೆಗಳ ಪ್ರತಿಮೆ, ಆಲಗಂಬ, ತುಳಸಿ ಕಟ್ಟೆ, ಒಂದು ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡಲಾಗಿದೆ. ಹೀಗೆ ಹತ್ತು ಹಲವು ದೇವಾನುದೇವತೆಗಳ ಮಂದಿರಗಳನ್ನು ನಿರ್ಮಿಸಿದ್ದು, ಇದೊಂದು ಪುಣ್ಯಕ್ಷೇತ್ರವಾಗಿ ದೇಶಕ್ಕೆ ಮಾದರಿ ಗ್ರಾಮವಾಗಲಿ ಎಂದು ಶುಭಹಾರೈಸಿದರು.

ಬಾಬಾಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಪಥವನ್ನು ವಿವರಿಸಿದರು.

ಹನುಮನಿಗೆ ವಿಶೇಷ ಪೂಜೆ, ಹೋಮ ಹವನ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸೇರಿ ಅನೇಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆ ಸಮಾರಂಭದಲ್ಲಿ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಹಳಿಂಗಳಿಯ ಶಿವಾನಂದ ಶ್ರೀಗಳು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಬಂಡಿಗಣಿ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳು, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು, ಚಿಮ್ಮಡ ಸಾಧು ಮಹಾರಾಜ ಮಠದ ಜನಾರ್ದನ ಮಹಾರಾಜರು, ಯರಗಟ್ಟಿಕರ ಸ್ವಾಮಿಗಳು, ಸಂಸದ ಪಿ. ಸಿ. ಗದ್ದಿಗೌಡರ, ವಿದ್ಯಾದರ ಸವದಿ, ಲಕ್ಕಪ್ಪ ಪಾಟೀಲ, ಯಮನಪ್ಪ ಕದ್ದಿ, ಶ್ರೀಶೈಲ ಕಂಕನವಾಡಿ, ಸುರೇಶ ಪಾಟೀಲ, ರಾಜು ಮಠದ, ಶ್ರೀಶೈಲ ದಲಾಲ, ಸಂಜಯ ತೆಗ್ಗಿ, ಸಂಗಮೇಶ ಪಾಟೀಲ, ಎಸ್.ಎಸ್. ಪಾಲಬಾಂವಿ, ಮಲ್ಲಿಕಾರ್ಜುನ ಗಡೆನ್ನವರ ಮತ್ತಿತರರಿದ್ದರು. ಸಂಜೆ ಅದ್ದೂರಿಯಾಗಿ ರಥೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net