12 ರಂದು ಮಾರುತೇಶ್ವರ ರಥೋತ್ಸವ

Maruteshwara Chariot Festival on the 12th
Published on

ತಾಳಿಕೋಟೆ : ಪಟ್ಟಣದ ಆಶ್ರಯ ಬಡಾವಣೆಯ ಮಾರುತೇಶ್ವರ ದೇವಸ್ಥಾನದ ಜಾತ್ರೆ ಹಾಗೂ ಮಹಾ ರಥೋತ್ಸವ ಏ.12ರಂದು ಜರುಗಲಿದೆ. ಬೆಳಗ್ಗೆ 6ಕ್ಕೆ ಮಾರುತೇಶ್ವರ ದೇವಸ್ಥಾನದಲ್ಲಿ ಹನುಮಂತನ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾ ಮಂಗಳಾರತಿ ಜರುಗಲಿವೆ.

ಪಲ್ಲಕ್ಕಿ ಉತ್ಸವ, ಮಾರುತೇಶ್ವರ ರಥೋತ್ಸವದ ಕಳಸ ಕನ್ನಡಿಯೊಂದಿಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾ ಪ್ರಸಾದ, ಸಂಜೆ 5.30ಕ್ಕೆ ಮಾರುತೇಶ್ವರ ರಥೋತ್ಸವ ಜರುಗಲಿದೆ.

ರಾತ್ರಿ 9.30ಕ್ಕೆ ರಬಿನಾಳದ ಬಸವೇಶ್ವರ ಬೈಲಾಟ ಸಂಘದವರಿಂದ ‘ರೇಣುಕಾ ಯಲ್ಲಮ್ಮದೇವಿ’ ಬೈಲಾಟ ಪ್ರದರ್ಶನಗೊಳ್ಳಲಿದೆ ಎಂದು ಜಾತ್ರೋತ್ಸವ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net