

ಗೊರೇಬಾಳ: ಇಲ್ಲಿನ ಗೊರೇಬಾಳ ಕ್ಯಾಂಪ್‌ನಲ್ಲಿ ಮೇ 17ರಂದು ಶ್ರೀ ಮರುಳ ಸಿದ್ಧೇಶ್ವರ ಹಾಗೂ ಗೌರಮ್ಮ ದೇವಿ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಡಾ.ಸಿದ್ದಯ್ಯ ತಾತ ತಿಳಿಸಿದ್ದಾರೆ.
ಉಮಳಿ ಹೊಸೂರಿನ ಕಿಡಿಗಣಯ್ಯ ಸ್ವಾಮಿ, ಕಂಬಾಳಿಮಠದ ಅಮರೇಶ್ವರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಶನಿವಾರ ಬೆಳಗ್ಗೆ 6ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಮಹಾರುದ್ರಾಭೀಷೇಕ, ಕುಂಕುಮಾರ್ಚನೆ ಹಾಗೂ ಶ್ರೀರುದ್ರ ಹೋಮ ಹವನ, ಗಂಗೆಸ್ಥಳ ಪೂಜೆ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ ರಥೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ.