ಮರುಳಸಿದ್ಧೇಶ್ವರ ಸ್ವಾಮಿ ತೇರುಗಡ್ಡೆ ಹೊರಗೆ

UJJINI Ratha
ಉಜ್ಜಿನಿಯಲ್ಲಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ತೇರುಗಡ್ಡೆಯನ್ನು ಹೊರತರಲಾಯಿತು.
Published on

ಉಜ್ಜಿನಿ: ಉಜ್ಜಿನಿ ಪೀಠದ ಜಗದ್ಗುರು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಭಾನುವಾರ ತೇರುಗಡ್ಡೆಯನ್ನು ಹೊರ ತರಲಾಯಿತು.

ಬೆಳಗ್ಗೆ 10.30ಕ್ಕೆ ಸಕಲ ವಾದ್ಯ ಮೇಳ, ಭಕ್ತರ ಜಯ ಘೋಷದೊಂದಿಗೆ ತೇರಿನ ಮನೆಯಿಂದ ಹೊರತಂದು ರಥ ಕಟ್ಟುವ ಸ್ಥಳದಲ್ಲಿ ನಿಲ್ಲಿಸಲಾಯಿತು. ಗ್ರಾಮದ ಹಾಗೂ 9 ಪಾದಗಟ್ಟೆಗಳ ಭಕ್ತರು ಪಾಲ್ಗೊಂಡಿದ್ದರು. ಮೇ 15 ರಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವವು ಜರುಗಲಿದ್ದು, ಮೇ 16ರಂದು ಶಿಖರಕ್ಕೆ ತೈಲಾಭಿಷೇಕ ನೆರವೇರಲಿದೆ. ಮೇ 17 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net