

ಅಥಣಿ: ಮರುಳಶಂಕರ ದೇವರ ಬದುಕು ತೆರೆದ ಪುಸ್ತಕದಂತೆ. ಗಚ್ಚಿನಮಠದ ಸಪ್ತಯತಿಗಳಲ್ಲಿ ಅವರು ಒಬ್ಬರಾಗಿದ್ದರು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಲಿಂ.ಮರುಳಶಂಕರ ದೇವರ 13ನೇ ಪುಣ್ಯಸ್ಮರಣೆ ಹಾಗೂ ಡಾ.ಮಹಾಂತೇಶ ಉಕ್ಕಲಿ ರಚಿಸಿದ ಮರುಳಶಂಕರ ದೇವರ ಜೀವನ ಚರಿತ್ರೆ ಗ್ರಂಥವನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ, ಗಚ್ಚಿನಮಠಕ್ಕೆ ಬಂದ ಯತಿಗಳೆಲ್ಲ ಶಿವಯೋಗಿಗಳಾದರು. ಮರುಳಶಂಕರ ದೇವರು ಶಿವಲಿಂಗದ ಮುಂದಿನ ನಂದಿಯಾಗಿದ್ದರು ಎಂದು ತಿಳಿಸಿದರು. ಉಪನ್ಯಾಸಕ ಡಾ.ಮಹಾಂತೇಶ ಉಕ್ಕಲಿ, ಹೊನವಾಡದ ಬಾಬುರಾವ ಮಹಾರಾಜರು ಮಾತನಾಡಿದರು.
ನಿಪ್ಪಾಣಿ ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಿಕಾರ್ಜುನ ಮಗದುಮ್ಮ, ಹನುಮಂತ ಪೂಜಾರಿ, ಶಿವಾನಂದ ದಿವಾನಮಳ, ಪ್ರಕಾಶ ಮಹಾಜನ, ಅಲ್ಲಪ್ಪ ನಿಡೋಣಿ, ಮುರುಗೇಶ ಬಾನಿ, ಗಿರೀಶ ದಿವಾನಮಳ, ಈರಣ್ಣ ಅಡಗಲ್ಲ, ಚಂದ್ರಶೇಖರ ಯಲ್ಲಟ್ಟಿ ಇತರರಿದ್ದರು.