ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನ

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನವನ್ನು ಆಚರಿಸಲಾಯಿತು. ಬೆನಡಿಕ್ಟ್ ಆರ್.ಸಲ್ದಾನ, ಡಾ. ವೀಣಾ, ನಾಗರಾಜು, ಪ್ರಿಯಾ, ನಿರ್ಮಿತಾ, ರಾಘವೇಂದ್ರ, ಅಕ್ಷಿತಾ , ಬೋಜಮ್ಮ ಸೋಮಣ್ಣ, ಗಾಯತ್ರಿ ಇತರರಿದ್ದರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನವನ್ನು ಆಚರಿಸಲಾಯಿತು. ಬೆನಡಿಕ್ಟ್ ಆರ್.ಸಲ್ದಾನ, ಡಾ. ವೀಣಾ, ನಾಗರಾಜು, ಪ್ರಿಯಾ, ನಿರ್ಮಿತಾ, ರಾಘವೇಂದ್ರ, ಅಕ್ಷಿತಾ , ಬೋಜಮ್ಮ ಸೋಮಣ್ಣ, ಗಾಯತ್ರಿ ಇತರರಿದ್ದರು.
Published on

ವಿರಾಜಪೇಟೆ: ಪಟ್ಟಣದ ಕಾವೇರಿ ಕಾಲೇಜಿನಲ್ಲಿ ಭಾನುವಾರ ಹುತಾತ್ಮ ದಿನವನ್ನು ಆಚರಿಸಲಾಯಿತು.

ಭಗತ್ ಸಿಂಗ್, ಸುಖದೇವ್, ರಾಜ್ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ, ಈ ಮೂರು ಕ್ರಾಂತಿಕಾರಿಗಳು ಅಸಂಖ್ಯಾತ ಭಾರತೀಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲಿದಾನ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಇರುತ್ತದೆ. ಈ ಮೂರು ಮಹನೀಯರಲ್ಲಿ ಇದ್ದ ದೇಶ ಪ್ರೇಮ, ದೇಶಾಭಿಮಾನ ಎಲ್ಲರಲ್ಲೂ ನೆಲೆಯಾಗಬೇಕು. ನಾವೆಲ್ಲ ಭಾರತೀಯರೆಂಬ ಹೆಮ್ಮೆಯಿಂದ ದೇಶ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದರು.

ಕಾಲೇಜಿನ ಐಕ್ಯುಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ ಮಾತನಾಡಿ, ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು 1931 ಮಾ.23ರಂದು ಗಲ್ಲಿಗೇರಿಸಿದ್ದರು. ಈ ದಿನವನ್ನು ಹುತಾತ್ಮ ದಿನವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಭಗತ್ ಸಿಂಗ್ ಸುಖದೇವ್, ರಾಜ್‌ಗುರು ಅವರ ತ್ಯಾಗ ಮತ್ತು ಶೌರ್ಯದ ಕಥೆ ಭಾರತೀಯರಿಗೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಯುವ ಜನತೆ ಮೋಜು ಮಸ್ತಿ ಯಲ್ಲಿ ಜೀವನ ವ್ಯರ್ಥ ಮಾಡದೆ ಸದಾ ಇಂತಹ ಮಹನೀಯರ ಕಥೆಗಳಿಂದ ಪ್ರೇರೇಪಿತರಾಗಿ ದೇಶದ ಅಭಿವೃದ್ಧಿಗೆ ಸದಾ ತಮ್ಮಿಂದಾದ ಕೊಡುಗೆ ನೀಡಬೇಕು ಎಂದರು.

ನಂತರ ವಿದ್ಯಾರ್ಥಿನಿಯರಾದ ರಾಧಿಕಾ, ಕೌಸಲ್ಯ ಮಹನೀಯರ ಜೀವನ ಹಾಗೂ ಹೋರಾಟದ ಬಗ್ಗೆ ವಿಚಾರ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net