

Martial arts : ಜಿಡಬ್ಲ್ಯುಆರ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಡಬ್ಲ್ಯುಎಸ್ಎಸ್ ಸ್ಪೋರ್ಟ್ಸ್ ಜತೆಗೂಡಿ ಮಹಿಳಾ ಸಬಲೀಕರಣ ಮತ್ತು ಸರಕ್ಷತೆಯ ಉದ್ದೇಶದ ‘ಜಿಡಬ್ಲ್ಯುಆರ್ ಬ್ರೂಸ್ಲಿ ಮಾರ್ಷಿಯಲ್ ಆರ್ಟ್ಸ್ ಸೀಸನ್-5’ ಆಯೋಜನೆಗೆ ಮುಂದಾಗಿದೆ.
ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಈ ಬಾರಿ ‘ಮಾರ್ಷಲ್ ಆರ್ಟ್ ಮೂಲಕ ಮಹಿಳೆಯರಿಗೆ ಹೆಚ್ಚಿನ ದೃಢತೆ’ ( Unbreakable Women's Power Through Martial Arts ) ಧ್ಯೇಯವಾಕ್ಯ ದೊಂದಿಗೆ ಆಯೋಜಿಲಾಗುತ್ತಿದೆ.
ಜೂ. 22ರಂದು ನಿಗದಿಯಾಗಿರುವ ಈ ಕಾರ್ಯಕ್ರಮದ ಭಾಗವಾಗಿ ಮಾರ್ಷಲ್ ಆರ್ಟ್ಸ್ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ತೋರಿದವರಿಗೆ ‘ಜಿಡಬ್ಲ್ಯುಆರ್ ಫೀನಿಕ್ಸ್ ರೈಸಿಂಗ್ ಅವಾರ್ಡ್’ ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ವಿಶ್ವದ ನಾನಾ ಭಾಗಗಳಲ್ಲಿ ಸಾಧನೆ ಮಾಡಿರುವ 100ಕ್ಕೂ ಹೆಚ್ಚು ಮಾರ್ಷಲ್ ಆರ್ಟ್ ಮಾಸ್ಟರ್ಗಳು, ಗ್ರ್ಯಾಂಡ್ ಮಾಸ್ಟರ್ಗಳು ಮತ್ತು ಸ್ವರಕ್ಷಣೆ ತರಬೇತುದಾರರಿಗೆ ಟ್ರೋಫಿ ಹಾಗೂ ಪ್ರಶಂಸನಾ ಪತ್ರ ಒಳಗೊಂಡಿರುವ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 30 ನಿಮಿಷಗಳವರೆಗೆ ಸತತವಾಗಿ ಮಾರ್ಷಲ್ ಆರ್ಟ್ ಪ್ರದರ್ಶಿಸುವ ಮೂಲಕ ಜಾಗತಿಕ ವಿಶ್ವದಾಖಲೆ ನಿರ್ವಿುಸಲು ಮುಂದಾಗಲಿದ್ದಾರೆ. ಜಿಡಬ್ಲ್ಯುಆರ್ ಡ್ರ್ಯಾಗನ್ ಲೆಗಸಿ ಹೆಸರಿನಲ್ಲಿ ನಡೆಸಲಾಗುವ ಈ ಪ್ರಯತ್ನದಲ್ಲಿ ಭಾರತ, ಮಲೇಷಿಯಾ, ಶ್ರೀಲಂಕಾ, ಕೆನಡಾ, ಅಮೆರಿಕ, ಬೆಲ್ಜಿಯಂ, ಯುಎಇ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನೇಪಾಳದಿಂದ ಮಾರ್ಷಲ್ ಆರ್ಟ್ಸ್ ಪ್ರದರ್ಶಕರು ತಾವಿರುವೆಡೆಗಳಿಂದಲೇ ಜತೆಯಾಗಲಿದ್ದಾರೆ.
ಕರ್ನಾಟಕ ಸರ್ಕಾರದ ಅಧಿಕಾರಿಗಳಲ್ಲದೆ ಅಂತಾರಾಷ್ಟ್ರೀಯ ಮಾರ್ಷಲ್ ಆರ್ಟ್ ಗ್ರ್ಯಾಂಡ್ ಮಾಸ್ಟರ್ಗಳು ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದ ಸುಮನ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9360805009/9003222618 ಅನ್ನು ಸಂಪರ್ಕಿಸಿ.