ಮಾರ್ಟಳ್ಳಿಯ ಕೀರೆಪಾತಿ ತಂಡ ಪ್ರಥಮ

08 HANUR 2
ಹನೂರಿನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮಾರ್ಟಳ್ಳಿಯ ಕೀರೆಪಾತಿ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಆನಂದ್, ಸುದೇಶ್, ಸೋಮಶೇಖರ್, ಮಂಜುನಾಥ್ ಪ್ರಸಾದ್ ಇತರರು ಇದ್ದರು.
Published on

ಹನೂರು : ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾರ್ಟಳ್ಳಿಯ ಕೀರೆಪಾತಿ ತಂಡ ಪ್ರಥಮ ಸ್ಥಾನ ಪಡೆಯಿತು.

3 ದಿನಗಳ ಕಾಲ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು. ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿತ್ತು. ತಾಲೂಕಿನ ಬಂಡಳ್ಳಿಯ ಎವಿಎಂ ಟೈಟಾನ್, ದೊಡ್ಡಿಂದುವಾಡಿಯ ಸಾನ್ವಿ ಇಲವೆನ್, ಲೊಕ್ಕನಹಳ್ಳಿಯ ಅಪ್ಪು ಟೀಮ್, ಮಾರ್ಟಳ್ಳಿಯ ಕೀರೆಪಾತಿ, ಕೌದಳ್ಳಿಯ ಟ್ರೋಫಿ ಫೈಟರ್ಸ್‌, ಮಹದೇಶ್ವರ ಬೆಟ್ಟದ ವಾರಿಯರ್ಸ್‌, ಹನೂರಿನ ಹಂಟರ್ಸ್‌ ಹಾಗೂ ಪವರ್ ವಾರಿಯರ್ಸ್‌ ತಂಡಗಳು ಭಾಗವಹಿಸಿದ್ದವು.
ಇದರಲ್ಲಿ 6 ಓವರ್‌ಗೆ ನಿಗದಿಗೊಳಿಸಿದ್ದ ಫೈನಲ್ ಪಂದ್ಯಾವಳಿಯಲ್ಲಿ ಮಾರ್ಟಳ್ಳಿಯ ಕೀರೆಪಾತಿ ತಂಡ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಕೌದಳ್ಳಿಯ ಟ್ರೋಫಿ ಫೈಟರ್ಸ್‌ ತಂಡ 6 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 56 ರನ್ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆಯಿತು.

ಪ್ರಥಮ ಸ್ಥಾನ ಗಳಿಸಿದ ಮಾರ್ಟಳ್ಳಿಯ ಕೀರೆಪಾತಿ ತಂಡಕ್ಕೆ 60 ಸಾವಿರ ರೂ. ನಗದು ಬಹುಮಾನ, ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ಕೌದಳ್ಳಿಯ ಟ್ರೋಫಿ ಫೈಟರ್ಸ್‌ ತಂಡಕ್ಕೆ 40 ಸಾವಿರ ರೂ., ಟ್ರೋಫಿ ನೀಡಿ ಗೌರವಿಸಲಾಯಿತು.

ಪಪಂ ಸದಸ್ಯರಾದ ಆನಂದ್, ಸುದೇಶ್, ಸೋಮಶೇಖರ್, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್, ಸಮಾಜ ಸೇವಕ ಜಿ.ಸಿ.ಕಿರಣ್, ಕ್ರಿಕೆಟ್ ಕ್ಲಬ್ ಅಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ರಿಜ್ವಾನ್, ಮುಖಂಡರಾದ ನಾಗರಾಜು, ನೂತನ್, ಇಸ್ಮಾಯಿಲ್, ನಾಗರೆಡ್ಡಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net