ಶಾಸಕ ದರ್ಶನ್‌ಗೊಂದು ಮದುವೆ ಮಾಡಿಸಿ ಸರ್ !

DarshanDhruvyanarayana
Published on

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ‘ಗೃಹಲಕ್ಷ್ಮೀ’ ಯೋಜನೆ ಜಾರಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ವೇಳೆ ನಂಜಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರ ಮದುವೆ ವಿಚಾರವಾಗಿ ಹಾಸ್ಯದ ಮಾತುಕತೆಯೂ ನಡೆಯಿತು.

ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ವೇಳೆ ‘ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೊಂದು ಮದುವೆ ಮಾಡಿಸಿ ಸರ್’ ಎಂದು ಶಾಸಕ ಕೆ.ಹರೀಶ್ ಗೌಡ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಮಾಡಿದರು! ಪ್ರತಿಕ್ರಿಯಿಸಿದ ಸಚಿವರು ‘ಅವನು ಯಾವಾಗ ಹೇಳುತ್ತಾನೆ ಅವಾಗ ಮಾಡಿಸುತ್ತೇನೆ’ ಎಂದು ಉತ್ತರಿಸಿದರು.

ಪಕ್ಕದಲ್ಲೇ ಇದ್ದ ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ತಕ್ಷಣ ‘ಅವನು ರೆಡಿ ಇದ್ದಾನೆ ಸರ್’ ಎಂದರು. ‘ಅವನು ಹೇಳಲ್ಲ. ನಾವೇ ಮಾಡಿಸಬೇಕು’ ಎಂದು ಮತ್ತೆ ಶಾಸಕ ಕೆ.ಹರೀಶ್ ಗೌಡ ಹಾಸ್ಯ ಮಾಡಿದರು. ‘ಒಂದು ದೊಡ್ಡ ಎಲ್ಇಡಿ ಹಾಕಿಸುತ್ತೇನೆ. ಅವನಿಗೆ ಯಾರು ಇಷ್ಟ ಅವನೇ ಪಿಕ್ ಮಾಡುತ್ತಾನೆಂದು’ ಸಚಿವ ಮಹದೇವಪ್ಪ ಹಾಸ್ಯ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net