

ಮಡಿಕೇರಿ: ಕೌಟುಂಬಿಕ ಜಂಜಾಟ, ನಿತ್ಯದ ಕೆಲಸ ಕಾರ್ಯವನೆಲ್ಲ ಬದಿಗೊತ್ತಿ ಸಮವಸ್ತ್ರತೊಟ್ಟ ಮಹಿಳೆಯರು ನಾವೇನು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ ಕ್ರಿಕೇಟ್ ಬ್ಯಾಟ್ ಹಿಡಿದು ಸಿಕ್ಸ್ ಫೋರ್ ಬಾರಿಸಿ ಸಂಭ್ರಮಿಸಿದರು. ಮಹಿಳೆಯರು ತಯಾರಿಸಿದ ವಿವಿಧ ಬಗೆಯ ಖಾದ್ಯಗಳ ಸ್ಟಾಲ್‌ಗಳು, ಚಿಯರ್ ಗರ್ಲ್ಸ್ ತಂಡದ ಮನಮೋಹಕ ನೃತ್ಯದ ದೃಶ್ಯ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಸಂಭ್ರಮದ ಕಳೆಯಾಗಿತ್ತು.
ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ೨ನೇ ವರ್ಷ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಕ್ರಿಕೇಟ್ ಪಂದ್ಯಾಟ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯುವ ಮೂಲಕ ಮೈದಾನದಲ್ಲಿ ಮಹಿಳೆಯ ಓಡಾಟವೇ ಎಲ್ಲರ ಗಮನ ಸೆಳೆಯಿತು.
೬ ಓವರುಗಳ ಪಂದ್ಯಾವಳಿಯಲ್ಲಿ ೨೫ ವರ್ಷ ಮೇಲ್ಪಟ್ಟ ಒಟ್ಟು ೧೫ ವಿವಾಹಿತ ಮಹಿಳಾತಂಡಗಳು ಭಾಗವಹಿಸಿದವು. ಟೀಂ ಮಾಲ್ದಾರೆ ತಂಡ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡ ಅಂತಿಮ ಹಂತಕ್ಕೆ ಪ್ರವೇಶಿಸಿತು.
ಫೈನಲ್ ಹಂತದಲ್ಲಿ ಟಾಸ್ ಗೆದ್ದ ಮಾಸ್ಟರ್ ಬ್ಲಾಸ್ಟ್ ತಂಡ ಬ್ಯಾಟಿಂಗ್‌ನ್ನು ಆಯ್ಕೆ ಮಾಡಿ ನಿಗದಿತ ನಾಲ್ಕು ಓವರುಗಳಿಗೆ ೨೩ರ ಗುರಿ ನೀಡಿತ್ತು. ಅಲ್ಪಮೊತ್ತದ ಗುರಿ ಬೆನ್ನತಿದ ಮಾಲ್ದಾರೆ ತಂಡ ೨.೩ ಎಸೆತಗಳಲ್ಲಿ ಗೆದ್ದು ಬೀಗಿತು. ಮೂರನೇ ಬಹುಮಾನಕ್ಕೆ ಸಂಭ್ರಮ ತಂಡದೊಂದಿಗೆ ಸೆಣಸಾಡಿದ ನೀಲೀ ಆಟ್ ಟೀ ಕೋಕೇರಿ ತಂಡ ಮೂರನೇ ಬಹುಮಾನ ಪಡೆಯಿತು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಂಡೆಪಂಡ ಡಾ.ಪುಷ್ಪಕುಟ್ಟಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಹುಮುಖ ಪಾತ್ರವನ್ನು ವಹಿಸುತಿರುವ ಮಹಿಳೆಯ ಪಾತ್ರ ಗೌರವಿಸುವಂತದ್ದು. ಕುಟುಂಬಗಳ ನಡುವೆ ಬದುಕು ಕಟ್ಟಿಕೊಳ್ಳುತಿರುವ ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಕ್ರಿಕೇಟ್ ಪಂದ್ಯಾಟವನ್ನು ಆಯೋಜಿಸಿದ ಚೆಟ್ಟಳ್ಳಿಯ ಅವರ್ ಕ್ಲಬ್ ಕಾರ್ಯಕ್ಕೆ ಶ್ಲಾಘಿಸಿದರು.
ಕ್ಲಬ್‌ನ ಅಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ ಮಾತನಾಡಿದರು. ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಕಾರ್ಯದರ್ಶಿ ಮನೆಪಂಡ ಅಂಜಲಿ, ಖಜಾಂಜಿ ಮುಳ್ಳಂಡ ಮಾಯಮ್ಮ ತಮ್ಮಯ್ಯ, ಮಾಜಿ ಅಧ್ಯಕ್ಷೆ ಕೊಂಗೇಟಿರ ದೇಚುಮುದ್ದಯ್ಯ ವೇದಿಕೆಯಲ್ಲಿದ್ದರು. ಮೂಡೆರ ಧರಣಿ ಪ್ರಾರ್ಥಿಸಿ ಕೊಂಗಂಡ ವಿಜಯ ಮುತ್ತಣ್ಣ ಅತಿಥಿಗಳ ಪರಿಚಯಿಸಿ ಕೊಂಗೇಟಿರ ವೀಣಾ ಅಪ್ಪಣ್ಣ, ವಂದಿಸಿ, ಕೇಟೋಟಿರ ವೀಣಾ ಚಂಗಪ್ಪ ನಿರೂಪಿಸಿದರು.
ಸಮಾರೋಪ: ಅವರ್ ಕ್ಲಬ್ನಿನ ಅಧ್ಯಕ್ಷೆ ಸುನಿತಾ ಮಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಡೆಪಂಡ ಡಾ.ಪುಪ್ಪಕುಟ್ಟಣ್ಣ ವೇದಿಕೆಯಲ್ಲಿದ್ದರು. ಟೀಂ ಮಾಲ್ದಾರೆ ತಂಡ ಪ್ರಥಮ, ಮಾಸ್ಟರ್ ಬ್ಲಾಸ್ಟರ್ ತಂಡ ದ್ವಿತೀಯ, ನೀಲೀ ಆಟ್ ಟೀ.ಕೋಕೇರಿ ಮಹಿಳಾತಂಡ ಮೂರನೇ ಬಹುಮಾನ ಪಡೆದರು.
ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಬೆಸ್ಟ್ ಬಾಲರ್, ಟೀಂ ಮಾಲ್ದಾರೆ ತಂಡದ ಸುಜಿತಾ ಬೆಸ್ಟ್ ಬ್ಯಾಟರ್ ಹಾಗೂ ಟೀಂ ಸಂಭ್ರಮಾ ತಂಡದ ಅಂಜನಾ ಅತ್ಯಧಿಕ ರನ್ ಬಹುಮಾನ ಪಡೆದರು. ಅತ್ಯುತಮ ವಿಕೇಟ್ ಕೀಪರ್ ಟೀಂ ಸಂಭ್ರಮಾ ತಂಡದ ನಿಶಾ, ಟೀಂ ಸಂಭ್ರಮದ ಲೀಲಾವೇಣು ಹಿರಿಯ ಆಟಗಾರ್ತಿ ಬಹುಮಾನ ಪಡೆದರು. ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗೂ ಚೆಟ್ಟಳ್ಳಿಯ ಅವರ್ ಕ್ಲಬ್ ತಂಡ ಚಿಯರ್ ಗರ್ಲಸ್ ಬಹುಮಾನ ನೀಡಲಾಯಿತು. ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿ ಲಕ್ಕಂಡ್ರ ಕೋಮಲ ಜಯಂತ್ ನಿರೂಪಿಸಿದರು.