ವಿವಾಹಿತೆ ಶವವಾಗಿ ಪತ್ತೆ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ತಾಂಡಾದ ಹತ್ತಿರ ತಂಗಡಗಿ ರಸ್ತೆ ಪಕ್ಕದ ಹೊಲವೊಂದರಲ್ಲಿ ವಿವಾಹಿತೆಯ ಶವ ಅರೆನಗ್ನಾವಸ್ಥೆಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಗಂಡನಿಂದ ಪರಿತ್ಯಕ್ತೆಯಾಗಿದ್ದ ಶೋಭಾ ರೋಹಿತ್​ ಲಮಾಣಿ (ನಾಯಕ)(30) ಮೃತ ಮಹಿಳೆ.

ಇದು ಕೊಲೆ ಎಂದು ಆಕೆಯ ತಾಯಿ ಶಾಂತವ್ವ ಬಾಸಪ್ಪ ಲಮಾಣಿ (ರಾಠೋಡ) ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೌಂಡಿ ಕೆಲಸ ಮಾಡುತ್ತಿದ್ದ ತಾಂಡಾ ಪಕ್ಕದಲ್ಲಿರುವ ಮುದ್ನಾಳ ಗ್ರಾಮದ ಭಾಷಾ ಕಾಶಿಮಸಾ ಸುಗಂದಿ ಶೋಭಾಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ.

ತಾನು ಸತ್ತರೆ ಬಾಷಾನೇ ಕಾರಣ ಎಂದು ಶೋಭಾ ತನ್ನ ಮುಂದೆ ಹೇಳಿದ್ದಳು. ಆಕೆಯ ಕೊಲೆಗೆ ಬಾಷಾ ಹಾಗೂ ಇನ್ನಿತರರು ಕಾರಣ ಎಂದು ಶಾಂತವ್ವ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ ಶವ ದೊರೆತ ಸ್ಥಳಕ್ಕೆ ಬಂದಿದ್ದ ಶೋಭಾಳ 6 ವರ್ಷದ ಮಗಳು 2&3 ದಿನಗಳ ಹಿಂದೆ ೋನಿನಲ್ಲಿ ನಮ್ಮವ್ವ ಭಾಷಾನೊಂದಿಗೆ ಜಗಳ ಆಡುತ್ತಿದ್ದಳು. ಅಂದೇ ಸಂಜೆ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರಲಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ನೇತೃತ್ವದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್​ಐ ಸಂಜಯ ತಿಪ್ಪರಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net