ಪಾಲಕರ ವಿರೋಧಕ್ಕೆ ಮಣಿಯದೆ ಚಿತ್ರದುರ್ಗದ ದೇವಾಲಯದಲ್ಲಿ ವಿವಾಹವಾದ ಪ್ರೇಮಿಗಳು

wedding feb 27 2020
Published on

ಚಿತ್ರದುರ್ಗ: ಅಂತರ್ಜಾತಿ ವಿವಾಹಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಪ್ರೇಮಿಗಳು ಚಿತ್ರದುರ್ಗದ ದೇವಾಲಯದಲ್ಲಿ ವಿವಾಹ ನೆರವೇರಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಖಾನಾಹೊಸಳ್ಳಿ ಗ್ರಾಮದ ಸಂದೀಪ್​ ಮತ್ತು ನಂದಿನಿ ಎಂಬುವವರು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದ ಶ್ರೀರಂಗನಾಥ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಸಂದೀಪ್​ ಹಾಗೂ ನಂದಿನಿ ಇಬ್ಬರು ಅನ್ಯ ಜಾತಿಯವರು. ಹೀಗಾಗಿ ಎರಡು ಕುಟುಂಬದ ಪಾಲಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪಾಲಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ದುರ್ಗಾವರ ಗ್ರಾಮಸ್ಥರು ಹಾಗೂ ಸಂಬಂಧಿಕರು ಮುಂದೆ ನಿಂತು ವಿವಾಹ ನೆರವೇರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net