

ಮಂಗಳೂರು: ಮಹಿಳೆಯೋರ್ವರು ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮರಿಯಮ್ ಸನಾ(29) ನಾಪತ್ತೆಯಾದವರು. ಈಕೆಗೆ ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದು ಮೇ 19ರಂದು ಪತಿಯ ಮನೆಯಲ್ಲಿ ಮಲಗಿಕೊಂಡಿದ್ದರು. ಪತಿ ಬೆಳಗ್ಗೆ 9.30ಕ್ಕೆ ಎಚ್ಚರಗೊಂಡು ನೋಡಿದಾಗ ಮರಿಯಮ್ ಸನಾ ನಾಪತ್ತೆಯಾಗಿದ್ದರು. ಅಪಾರ್ಟ್‌ಮೆಂಟ್ ಪಕ್ಕದ ಜುವೆಲರಿ ಅಂಗಡಿಯ ಸಿಸಿಟಿವಿ ಫೂಟೇಜ್ ನೋಡಿದಾಗ ಒಬ್ಬಳೇ ಬ್ಯಾಗ್ ಹಿಡಿದುಕೊಂಡು ಮುಂಜಾವ 3.12ರ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆಕೆ ಮನೆಯಿಂದ ಹೋಗುವಾಗ ಸುಮಾರು 10 ಪವನ್ ಚಿನ್ನಾಭರಣ ಮತ್ತು ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.