ದಾಂಪತ್ಯ ಗೀತ ನಾಟಕ ಪ್ರದರ್ಶನ ಯಶಸ್ವಿ

Marriage song and drama performance a success
ಬಾದಾಮಿಯಲ್ಲಿ ದಾಂಪತ್ಯ ಗೀತ ನಾಟಕ ಪ್ರದರ್ಶನ.
Published on

ಬಾದಾಮಿ: ವಿಶ್ವಚೇತನ ಸಂಸ್ಥೆ ವತಿಯಿಂದ ಬಾಗಲಕೋಟೆಯ ಸಂಗಮ ಕಲಾ ತಂಡದಿಂದ ಭಾನುವಾರ ಸಂಜೆ ಪಟ್ಟಣದ ಶಿವಯೋಗಮಂದಿರ ಶಾಖಾಮಠದ ಆವರಣದಲ್ಲಿ ಡಾ. ನಿಂಗು ಸೋಲಗಿ ಅವರ ‘ನಾ ನಿನ್ನ ನಗಿ’ ನೋಡಿ ಕೃತಿಯ ರಂಗ ಪ್ರಯೋಗ ದಾಂಪತ್ಯ ಗೀತ ನಾಟಕ ಪ್ರದರ್ಶನ ನಡೆಯಿತು.

ಮಹಾಂತೇಶ ರಾಮದುರ್ಗ ನಿರ್ದೇಶನದ ನಾಟಕವನ್ನು ಶ್ರೀಕಾಂತ ಮತ್ತು ಅಕ್ಕುಶ್ರೀ ನವಲಗರಿ ದಂಪತಿ ಸುಂದರವಾಗಿ ಅಭಿನಯಿಸಿದರು. ದಂಪತಿಗಳ ನಡೆ, ನುಡಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿನ ಅನುಭವ ರಂಗಾಸಕ್ತರನ್ನು ತಣಿಸುವಂತೆ ಅಭಿನಯಿಸಿದರು.

ರಂಗಾಸಕ್ತರು, ಹಿರಿಯರು, ಯುವಕರು, ಮಹಿಳೆಯರು, ನಿವೃತ್ತ ನೌಕರರು ನಾಟಕ ವೀಕ್ಷಿಸಿದರು. ವಿಶ್ವಚೇತನ ಸಂಸ್ಥೆಯ ಕಾರ್ಯದರ್ಶಿ ಇಷ್ಟಲಿಂಗ ಶಿರಸಿ ಸ್ವಾಗತಿಸಿದರು. ಉಜ್ವಲ ಬಸರಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net