ಶಾಸಕಿ ರೂಪಾಲಿ ನಾಯ್ಕ ಪುತ್ರನ ವಿವಾಹ

6KWR3D
Published on

ಕಾರವಾರ: ಅಂಕೋಲಾ-ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರ ಪುತ್ರ ಪರ್ಭತ್ ಹಾಗೂ ಮೈಸೂರಿನ ರೇಖಾ ಅವರ ವಿವಾಹವು ಕಾರವಾರದ ದೇವಳಮಕ್ಕಿ ಸಮೀಪದ ನಿವಳಿ ಗ್ರಾಮದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು. ರಾಜ್ಯದ ಹಲವು ಗಣ್ಯರು ಶುಭ ಸಮಾರಂಭಕ್ಕೆ ಸಾಕ್ಷಿಯಾದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ, ನಟಿ ತಾರಾ ಅನುರಾಧಾ, ಶಾಸಕರಾದ ಆರ್.ವಿ.
ದೇಶಪಾಂಡೆ, ಸುನೀಲ ನಾಯ್ಕ, ಎಂಎಲ್​ಸಿಗಳಾದ ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್ ಹಾಗೂ ಹಲವು ಗಣ್ಯರು ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net