ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಪುಣ್ಯವಂತರು

tangadago 1
ತಂಗಡಗಿ ಗ್ರಾಮದ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಡಾ. ಚನ್ನವೀರ ಶಿವಾಚಾರ್ಯರು ಮಾತನಾಡಿದರು. ಹುಲಗಮ್ಮ ತಂಗಡಗಿ, ಸಿದ್ಧಲಿಂಗ ಶಿವಾಚಾರ್ಯರು, ಶಿವಪ್ರಕಾಶ ಶಿವಾಚಾರ್ಯರು, ಈಶ್ವರ ಗಡ್ಡಿ, ಶಾಂತಪ್ಪ ಪೂಜಾರಿ ಇತರರಿದ್ದರು.
Published on

ತಂಗಡಗಿ: ಸಾಮೂಹಿಕ ವಿವಾಹಗಳು ದಿಕ್ಕಿಲ್ಲದವರ, ಬಡವರ ಮದುವೆಗಳಲ್ಲ, ಅವು ಭಾಗ್ಯವಂತರ ಮದುವೆಗಳು. ಇಲ್ಲಿ ಮದುವೆಯಾಗುವವರು ಪುಣ್ಯವಂತರು ಎಂದು ಕುಂಟೋಜಿ ಭಾವೈಕ್ಯ ಮಠದ ಡಾ. ಶ್ರೀಗುರು ಚನ್ನವೀರ ಶಿವಾಚಾರ್ಯರು ನುಡಿದರು. ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ ಮಹೋತ್ಸವ, ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿ ಅತ್ತೆ, ಸೊಸೆ ಪರಸ್ಪರ ಹೊಂದಾಣಿಕೆಯ ಜೀವನ ನಡೆಸಬೇಕು. ಧಾರ್ಮಿಕ ಕೇಂದ್ರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವಂಥ ಕೆಲಸ ಮಾಡಬೇಕು. ಒಳ್ಳೇಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಬೇಕು ಎಂದರು.

ಇಳಕಲ್ಲ ತಹಸೀಲ್ದಾರ್ ಕಚೇರಿ ಉಪತಹಸೀಲ್ದಾರ್ ಈಶ್ವರ ಗಡ್ಡಿ, ಸಾನ್ನಿಧ್ಯ ವಹಿಸಿದ್ದ ಬಿಲ್‌ಕೆರೂರು ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಡಾ. ಸೋಮಶೇಖರ ಶಿವಾಚಾರ್ಯರು ಮಾತನಾಡಿದರು.

ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶಾಂತಪ್ಪ ಪೂಜಾರಿ, ಸಂಗಣ್ಣ ಗುಳೇದಗುಡ್ಡ, ಶ್ರೀಶೈಲ ಹುಲ್ಲಳ್ಳಿ, ಚರಲಿಂಗಪ್ಪ ಹಾದಿಮನಿ, ಮಹಾಂತೇಶ ಪೂಜಾರಿ, ಕಾಶಪ್ಪ ಪುಡಜಾಲಿ, ಸುರೇಶ ಹಾದಿಮನಿ, ಮಹಾಂತಪ್ಪ ಹಾದಿಮನಿ, ಸಿದ್ದರಾಮಪ್ಪ ಡೊಂಗರಗಾಂವಿ, ಬಸವರಾಜ ಹೊಳಿ, ಮುತ್ತು ಪೂಜಾರಿ, ಎಎಸ್‌ಐ ಬಿ.ಡಿ. ಪವಾರ ಇತರರಿದ್ದರು.

ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಗಮ್ಮ ತಂಗಡಗಿ ಅವರನ್ನು ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

29 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರೆಲ್ಲರಿಗೂ ಸಚಿವ ಶಿವರಾಜ ತಂಗಡಗಿ ಅವರು ತಾಳಿ, ಬಟ್ಟೆ ಕೊಡುಗೆ ನೀಡಿದ್ದರು. ಸಿ.ಎಸ್. ನಾವಿ ಸ್ವಾಗತಿಸಿದರು. ರಮೇಶ ಲಿಂಗದಳ್ಳಿ ನಿರೂಪಿಸಿದರು. ಸಂಗಣ್ಣ ದೇವರಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net