

ಕುಶಾಲನಗರ: ವಿವಾಹ ವಿಳಂಬವಾದ ಕಾರಣಕ್ಕೆ ಸೋಮವಾರ ತಡರಾತ್ರಿ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಮಾರುತಿ ಬಡಾವಣೆ ಯುವತಿ ಲ್ಯಾನ್ಸಿ (21) ಆತ್ಮಹತ್ಯೆ ಮಾಡಿದ್ದಾಳೆ.
ಗ್ರಾಮದ ಕಾಂತರಾಜು ಮತ್ತು ಎಲಿಜಬೆತ್ ಅವರ ಸಾಕು ಮಗಳು ಲ್ಯಾನ್ಸಿ ಕಳೆದ 3 ವರ್ಷಗಳಿಂದ ಕುಮಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಕುಮಾರ ಮದುವೆ ಮುಂದೂಡುತ್ತಿದ್ದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ.
ಮೃತಳ ತಂದೆ ಕಾಂತರಾಜು ಕುಶಾಲನಗರ ಠಾಣೆಯಲ್ಲಿ ದೂರು ನೀಡಿ, ಚೆಲುವರಾಜು ಬಂಧನಕ್ಕೆ ಒತ್ತಾಯಿಸಿದ್ದಾರೆ.