12 ವರ್ಷವಾದ್ರು ಮಕ್ಕಳಾಗಲಿಲ್ಲವೆಂದು ಮಹಿಳೆ ಆತ್ಮಹತ್ಯೆ

lady Suside+1
Published on

ರಾಣೆಬೆನ್ನೂರ: ಮದುವೆಯಾಗಿ 12 ವರ್ಷವಾದರೂ ಮಕ್ಕಳು ಆಗಲಿಲ್ಲ ಎಂಬ ಚಿಂತೆಯಿಂದ ತುಂಗಭದ್ರಾ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ಹರನಗಿರಿಯ ಯಲ್ಲಮ್ಮ ಪ್ರಕಾಶಪ್ಪ ಇಟ್ಟಿಯವರ (45) ಮೃತ ಮಹಿಳೆ.
ಮಕ್ಕಳ ಚಿಂತೆಯನ್ನು ಮನಸ್ಸಿಗೆ ಹಚ್ಚಿಕೊಂಡು ಗಂಡನ ಮನೆಯಿಂದ ತವರು ಮನೆಗೆ ಬಂದು ವಾಸವಾಗಿದ್ದಳು. ಇದರಿಂದ ಬೇಸತ್ತು ತುಂಗಭದ್ರಾ ನದಿಯ ಗುಂಡಿಯಲ್ಲಿ ಬಿದ್ದು, ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net