ತಂದೆ ಕೊನೆಯುಸಿರೆಳೆದ ಮರುದಿನವೇ ನಡೆಯಿತು ಮಕ್ಕಳ ಮದುವೆ: ಕಾರಣವೇನು ನೀವೇ ಓದಿ...

GLB BDR Marriage 18 MAR 20
Published on

ಚಿಟಗುಪ್ಪ: ಹೃದಯಘಾತದಿಂದ ತಂದೆ ಸಾವನ್ನಪ್ಪಿದರು. ಈ ನೋವು ಇರುವಂತೆಯೇ ಮರುದಿನವೇ ಮಕ್ಕಳ ಮದುವೆಯೂ ನೆರವೇರಿತು. ಗ್ರಾಮಸ್ಥರ ನೆರವು ಮತ್ತು ಸಹಕಾರದೊಂದಿಗೆ ನಡೆದ ಮದುವೆಯ ಹಿಂದಿದೆ ಒಂದು ಹೃದ್ಯ ಕಾರಣ.

ಇಂಥದ್ದೊಂದು ಮದುವೆ ನಡೆದಿರುವುದು ಕಂದಗೂಳದಲ್ಲಿ. ಈ ಕಂದಗೂಳ ಗ್ರಾಮದ ವಿಶ್ವನಾಥ ಶೇರಿಕಾರ (45) ಇವರ ಮಕ್ಕಳ ಮದುವೆ ಸೋಮವಾರ ನಿಗದಿಯಾಗಿತ್ತು. ಆದರೆ ಅವರು ಭಾನುವಾರವೇ ಹೃದಯಘಾತದಿಂದ ನಿಧನ ಹೊಂದಿದ್ದರು. ಇದರಿಂದಾಗಿ ಮನೆಯಲ್ಲಿ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದರು. ಮೃತ ವಿಶ್ವನಾಥ ಶೇರಿಕಾರ ಅವರ ಪುತ್ರ ನಾಗರಾಜನಿಗೆ ಪಕ್ಕದ ತಾಳಮಡಗಿ ಗ್ರಾಮದ ಕಾವೇರಿ ಅವರೊಂದಿಗೆ ಹಾಗೂ ಪುತ್ರಿ ಗೀತಾ ಅವರಿಗೆ ಕಮಲಾಪುರ ತಾಲೂಕಿನ ಮುದ್ದಡಗಾ ಗ್ರಾಮದ ನಾಗರಾಜ ಅವರೊಂದಿಗೆ ಮದುವೆ ನಿರ್ಣಯವಾಗಿತ್ತು.

ಮದುವೆಯ ಸಿದ್ಧತೆಯಲ್ಲಿದ್ದಾಗ ವಿಶ್ವನಾಥ ಹೃದಯಘಾತದಿಂದ ನಿಧನ ಹೊಂದಿದ್ದರು. ಶರಣ ತತ್ತ್ವದ ಅನುಯಾಯಿಗಳಾದ ಕಂದಗೂಳ ಗ್ರಾಮಸ್ಥರು ವಿಶ್ವನಾಥ ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ನಿಗದಿಯಂತೆ ಅವರ ಮಕ್ಕಳ ಮದುವೆ ಮಾಡಬೇಕೆಂದು ಒಮ್ಮತದ ನಿರ್ಧಾರ ಕೈಗೊಂಡರು. ಅದರಂತೆ ಕುಟುಂಬಸ್ಥರು ವಧು-ವರನ ಕಡೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ತಂದೆಯ ಆಸೆ ಎಲ್ಲರೂ ಸೇರಿ ಈಡೇರಿಸೋಣ ಎಂದು ಮದುವೆ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net