

ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ಆಡಳಿತ ಸಮಿತಿ ವತಿಯಿಂದ ಪ್ರಥಮ ಗ್ರಾಮ ಸಭೆ ಭಾನುವಾರ ಸಾನಿಧ್ಯದ ಉಮಾಮಹೇಶ್ವರಿ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಂಬಳ ಮನೆ ದಿನೇಶ್ ಶೆಟ್ಟಿ ಮಾರ್ಪಳ್ಳಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆಡಳಿತ ಸಮಿತಿ ಸದಸ್ಯರಾದ ಪಾಂಡುರಂಗ ನಾಯ್ಕ್ ಮಾರ್ಪಳ್ಳಿ, ಶಂಕರ್ ಆಚಾರ್ಯ ಮಾರ್ಪಳ್ಳಿ, ವಿಜಯಲಕ್ಷಿ$್ಮ ಎಂ., ಚಂದ್ರಾವತಿ ಎಂ., ಪರ್ಯಾಯ ಅರ್ಚಕ ವೆಂಕಟಾಚಲ ಉಪಾಧ್ಯಾಯ, ರಾಜೇಂದ್ರ ಉಪಾಧ್ಯಾಯ, ಅನಂತ ಉಪಾಧ್ಯಾಯ, ಪ್ರಸನ್ನ ಉಪಾಧ್ಯಾಯ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಗರೋಡಿ ಮನೆ ಶೇಖರ ಸುವರ್ಣ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಲಕ್ಷಿ$್ಮನಾರಾಯಣ ರಾವ್ ಸ್ವಾಗತಿಸಿ, ಸುಬ್ರಹ್ಮಣ್ಯ ಉಪಾಧ್ಯಾಯ ನಿರೂಪಿಸಿದರು, ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ಎಸ್. ಶೆಟ್ಟಿಗಾರ್ ವಂದಿಸಿದರು.
ದೇವಳದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಯಬೇಕು. ದೇವಸ್ಥಾನದಲ್ಲಿ 34 ವರ್ಷ ಸಂದರೂ ಜೀಣೋರ್ದ್ಧಾರ ಕಾರ್ಯ ನಡೆದಿಲ್ಲ. ಹೀಗಾಗಿ ಸ್ಥಳಿಯರ ಹಾಗೂ ಪರ ಊರಿನ ಭಕ್ತರ ನೆರವಿನಿಂದ ಭಗವತ್ಭಕ್ತರು ನೂತನ ಆಡಳಿತ ಸಮಿತಿಯೊಂದಿಗೆ ಕೈಜೋಡಿಸಿ ಜೀಣೋರ್ದ್ಧಾರದ ಕಾರ್ಯ ಮಾಡಬೇಕು. ಚಂದ್ರಕಾಂತ್ ತಂತ್ರಿ, ದೇವಸ್ಥಾನದ ಅನುವಂಶಿಯ ತಂತ್ರಿಗಳು.