ಅ.3ರಿಂದ ಮರೋಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

mng-28sep-maroli
Published on


ಮಂಗಳೂರು : ಇತಿಹಾಸ ಪ್ರಸಿಧ್ಧ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.3ರಿಂದ 13ರವರೆಗೆ ಬ್ರಹ್ಮಶ್ರೀ ಕೆ.ಯು.ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.3ರಂದು ಬೆಳಗ್ಗೆ ಉಷಾಪೂಜೆ ಜರಗಿ ಸಾಮೂಹಿಕ ಪ್ರಾರ್ಥನೆ, ಗಣಪತಿ ಹವನ, ಕೊಪ್ಪರಿಗೆ ಮುಹೂರ್ತದೊಂದಿಗೆ ನವರಾತ್ರಿ ಉತ್ಸವವು ಪ್ರಾರಂಭಗೊಳ್ಳಲಿದೆ. ಪ್ರತೀದಿನ ಬೆಳಿಗ್ಗೆ ಉಷಾಪೂಜೆ, ಗಣಪತಿಹೋಮ, ಮಧ್ಯಾಹ್ನ ಮಹಾಪೂಜೆ , ಪ್ರತೀದಿನ ಬೆಳಗ್ಗೆ 10ರಿಂದ 12ರವರೆಗೆ ಹಾಗೂ ಸಾಯಂಕಾಲ 6ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ , ಕೀರ್ತನೆ ಹಾಗೂ ರಾತ್ರಿ 8ಕ್ಕೆ ಮಹಾಪೂಜೆ ಜರಗಲಿದೆ.
ಅ.4ರಂದು ಸಾಯಂಕಾಲ 6ಕ್ಕೆ ದುರ್ಗಾನಮಸ್ಕಾರ ಪೂ , 11ರಂದು ಬೆಳಗ್ಗೆ 7.30ರಿಂದ ಲೋಕಕಲ್ಯಾಣಾರ್ಥವಾಗಿ ಚಂಡಿಕಾಹವನ ನಡೆಯಲಿದೆ. 12ರಂದು ಮಹಾನವಮಿ ಪೂಜೆ, 13ರಂದು ವಿಜಯದಶಮಿ ಪೂಜೆ ನೆರವೇರಲಿದೆ. ಉತ್ಸವದ ದಿನಗಳಲ್ಲಿ ಅನ್ನಸಂತರ್ಪಣೆ ಜರಗಲಿರುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net