ಮರೋಳಿ ಹೆದ್ದಾರಿಯಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ ಸವಾರ ಗಂಭೀರ

accident-15
Published on

ಮಂಗಳೂರು : ಮರೋಳಿ ಹೆದ್ದಾರಿಯಲ್ಲಿ ಬುಧವಾರ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಮಹಮ್ಮದ್ ಹನೀಫ್ (45) ಗಂಭೀರ ಗಾಯಗೊಂಡಿದ್ದಾರೆ. ಅವರ ಪತ್ನಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.


ಹನೀಫ್ ಅವರು ಮರೋಳಿಯಿಂದ ನಂತೂರಿನ ಕಡೆಗೆ ಪತ್ನಿ ರಮ್ಲತ್ ಜೊತೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಹ್ಯುಂಡೈ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಮುಂದಿನಿಂದ ಹೋಗುತ್ತಿದ್ದ ಇನ್ನೊಂದು ಕಾರಿಗೆ ಹೋಗಿ ಬಡಿದಿದೆ. ಇದರಿಂದ ಪತಿ ಒಂದು ಕಡೆಗೆ ಬಿದ್ದರೆ, ಪತ್ನಿಇನ್ನೊಂದು ಕಡೆಗೆ ಬಿದ್ದಿದ್ದಾರೆ.


ಮಹಮ್ಮದ್ ಹನೀಫ್ ಅದ್ಯಪಾಡಿಯವರಾಗಿದ್ದು, ಸದ್ಯ ಕುದ್ರೋಳಿಯಲ್ಲಿ ವಾಸವಿದ್ದಾರೆ. ವ್ಯವಹಾರ ನಿಮಿತ್ತ ಪತ್ನಿಯ ಜೊತೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿದೆ. ರಸ್ತೆಯಲ್ಲಿ ರಕ್ತದ ಕೋಡಿಯೇ ಹರಿದಿದ್ದು, ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ನೇರ ರಸ್ತೆಯಲ್ಲಿ ಅತಿ ವೇಗದ ಚಾಲನೆಯೇ ಸರಣಿ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net