

ಬೆಳ್ತಂಗಡಿ: ಪ್ರತಿಯೊಬ್ಬರ ಬದುಕಿನಲ್ಲೂ ಧರ್ಮಾಚರಣೆ ಮುಖ್ಯ. ಅದನ್ನು ಅಳವಡಿಸಿಕೊಂಡರೆ ಉನ್ನತ ಸ್ಥಾನಮಾನ ಪಡೆಯುವ ಜತೆಗೆ ಜೀವನದಲ್ಲಿ ಸಾರ್ಥಕ್ಯ ಪಡೆಯಬಹುದು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಮಹಾವೀರ್ ಜೈನ್ ಇಚ್ಲಂಪಾಡಿ ಹೇಳಿದರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ, ಮರೋಡಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ದಶಮಾನೋತ್ಸವ ಮತ್ತು ಶನೀಶ್ವರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಫ್ರೆಂಡ್ಸ್ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮರೋಡಿ ಗ್ರಾಪಂ ಅಧ್ಯಕ್ಷ ರತ್ನಾಕರ ಬುಣ್ಣಾನ್, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಪ್ರಗತಿಪರ ಕೃಷಿಕ ವಿಜಯ ಆರಿಗ ನಿಡ್ಡಾಜೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ರವೀಂದ್ರ ಅಂಚನ್, ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಪ್ರಗತಿಪರ ಕೃಷಿಕ ಶ್ರೀಧರ ಪೂಜಾರಿ ಭೂತಡ್ಕ ಶುಭ ಹಾರೈಸಿದರು.
ಸಂಘಟನೆಯ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು. ಘಟಕದ ಸಂಚಾಲಕರಾದ ಸುರೇಖಾ ಹೆಗ್ಡೆ, ಶಕುಂತಳಾ ಹಾರೊದ್ದು, ಸಹ ಸಂಚಾಲಕರಾದ ಸೌಮ್ಯಾ, ಪ್ರಭಾವತಿ ಹೆಗ್ಡೆ, ಸುಚಿತ್ರ ದಿನೇಶ್ ಗುರಿಯಡ್ಕ ಹಾಗೂ ಸದಸ್ಯರನ್ನು ಅಭಿನಂದಿಸಲಾಯಿತು.
ಯಶೋಧರ ಬಂಗೇರ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಅಧ್ಯಕ್ಷ ರಾಘವ ಬಂಗೇರ ವಂದಿಸಿದರು.
ಸುಬ್ರಹ್ಮಣ್ಯ ಪ್ರಸಾದ್ ನೇತೃತ್ವದಲ್ಲಿ ಸಂಜೆ ಕಲಶ ಪ್ರತಿಷ್ಠಾಪನೆ, ಶ್ರೀ ಶನೀಶ್ವರ ಪೂಜೆ, ರಾತ್ರಿ ಶ್ರೀ ಉಮಾಮಹೇಶ್ವರ ದೇವರಿಗೆ ರಂಗಪೂಜೆ ನಡೆಯಿತು. ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ತುಳು ನಾಟಕ ಪ್ರದರ್ಶನಗೊಂಡಿತು.
ಸಾಧಕರಿಗೆ ಗೌರವಾರ್ಪಣೆ
ದೇವೇಂದ್ರ ಹೆಗ್ಡೆ ಕೊಕ್ರಾಡಿ, ಜಯಂತ ಕೋಟ್ಯಾನ್, ರತ್ನಾಕರ ಬುಣ್ಣಾನ್, ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ರವೀಂದ್ರ ಅಂಚನ್, ನಿರೀಕ್ಷಾ ಎನ್.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ಮಾಜಿ ಪದಾಧಿಕಾರಿಗಳಾದ ಹರೀಶ್ ಬಂಗೇರ, ವಿದ್ಯಾನಂದ ಪೂಜಾರಿ, ಗಣೇಶ್ ಪೂಜಾರಿ, ಸುಜಿತ್ ಹೆಗ್ಡೆ, ರವಿವರ್ಮ, ಯಶೋಧರ ಕೋಟ್ಯಾನ್, ಸಂಘಟನೆಯ ಅಧ್ಯಕ್ಷ ರಾಘವ ಬಂಗೇರ, ಕಾರ್ಯದರ್ಶಿ ಯಶವಂತ ಪೂಜಾರಿ, ಕೋಶಾಧಿಕಾರಿ ತೇಜವರ್ಮ ಅವರನ್ನು ಅಭಿನಂದಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು.