ಬೆಳ್ತಂಗಡಿಯಲ್ಲಿ ಸಂತೆ ಮಾರುಕಟ್ಟೆಗೆ ಸರಿಯಾದ ವ್ಯವಸ್ಥೆಯಿಲ್ಲ. ಇರುವ ಸಂತೆ ಪ್ರಾಂಗಣದಲ್ಲಿ ಏಲಂ ಮೂಲಕ ಪಡೆದು ನಿತ್ಯ ವ್ಯಾಪಾರ ನಡೆಸುವವರು ಇದ್ದಾರೆ. ಉಳಿದಂತೆ ನಾಲ್ಕೈದು ವ್ಯಾಪಾರಿಗಳಿಗಷ್ಟೇ ಅವಕಾಶ ಇದೆ. ಉಳಿದವರು ರಸ್ತೆ ಬದಿ ವ್ಯಾಪಾರ ನಡೆಸುವವರು. ಸದ್ಯ, ಹೆದ್ದಾರಿ ಕಾಮಗಾರಿಗೆ ಎರಡೂ ಬಳಿ ಅಗೆಯಲಾಗಿದ್ದು ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.