ಹದಿನಾರು ಆಕಳು ಕರುಗಳ ರಕ್ಷಣೆ

030123 MM Halli Cow Proect
ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಆಕಳು ಕರುಗಳನ್ನು ವಾಹನ ಸಮೇತ ವಶಕ್ಕೆ ಪಡೆದಿರುವ ಮರಿಯಮ್ಮನಹಳ್ಳಿಯಲ್ಲಿ ಪೊಲೀಸರು.
Published on

ಮರಿಯಮ್ಮನಹಳ್ಳಿ: ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದ 16 ಆಕಳು ಕರುಗಳನ್ನು ಪಿಎಸ್‌ಐ ಹನುಮಂತಪ್ಪ ನೇತೃತ್ವದ ತಂಡ ರಕ್ಷಿಸಿದೆ. ಶ್ರೀರಾಮ ಸೇನೆ ಯುವಕರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕರುಗಳನ್ನು ರಕ್ಷಿಸಿ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಗೋಶಾಲೆ ಕಳುಹಿಸಿದ್ದಾರೆ. ಆರೋಪಿಗಳಾದ ಸಂತೋಷ ಹಾಗೂ ಈಶಪ್ಪನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net