

ಹುಬ್ಬಳ್ಳಿ: ಇಲ್ಲಿಯ ಭಂಡಿವಾಡ ಅಗಸಿ ಜೈಭೀಮನಗರದ ಶ್ರೀ ಮರಿಯಮ್ಮದೇವಿ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ಮಂಗಳವಾರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಬ್ರಾಹ್ಮೀಮುಹೂರ್ತದಲ್ಲಿ ದೇವಿಯವರಿಗೆ ನವವಿಧ ಸ್ನಾನಗಳು, ಮಹಾಭಿಷೇಕ, ವಿಶೇಷ ಪುಷ್ಪಾಲಂಕಾರ ಗೈದು ಉದಯಪೂಜೆ ನೆರವೇರಿಸಲಾಯಿತು.
ನಂತರ ಬೆಳಗ್ಗೆ 9ಕ್ಕೆ ಡೊಳ್ಳುಗಳು, ಜಾಂಜ್- ಮೇಳಗಳು, ಜೋಗಮ್ಮನವರು, ಸುಮಂಗಲೆಯರ ಪೂರ್ಣ ಕುಂಭಗಳೊಂದಿಗೆ ಹೊರಟ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ಚಾಲನೆ ನೀಡಿದರು.
ನಗರದ ಬಮ್ಮಾಪುರ ಓಣಿಯಲ್ಲಿರುವ ಗ್ರಾಮದೇವತೆಯರಾದ ದ್ಯಾಮವ್ವದೇವಿ ಮತ್ತು ದುರ್ಗವ್ವದೇವಿಯವರಿಗೆ ಹಾಗೂ ನಗರದ ದೇವತೆಯರಿಗೆ ಉಡಿತುಂಬಿ ಎಣ್ಣೆ-ದೀಪ ಕೊಟ್ಟು ಪೂಜೆಗೈದು ಪ್ರಮುಖ ರಸ್ತೆಗಳಿಂದ ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿದ ನಂತರ ದೇವಿಯವರಿಗೆ ಮಹಾಮಂಗಳಾರತಿ ನೆರವೇರಿಸಿ ಮಧ್ಯಾಹ್ನ 1.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ವಹಿಸಿದ್ದರು.
ದೇವಸ್ಥಾನದ ಅಧ್ಯಕ್ಷ ವಿರೂಪಾಕ್ಷ ಚಲವಾದಿ, ಹಿರಿಯರಾದ ವಾಗೇಶಗೌಡ ಪಾಟೀಲ, ಬಸವರಾಜ ಪಾಟೀಲ, ಶಿವಪುತ್ರಪ್ಪ ಚಿಕ್ಕೊಪ್ಪ, ಸಿದ್ದಪ್ಪ ಚೂರಿ, ಶಿವಾನಂದ ಜೇಕಿನಕಟ್ಟಿ, ಯಲ್ಲಪ್ಪ ಯರಗುಪ್ಪಿ, ಸತೀಶ ದೂಶಿ, ಮಹಾದೇವ ಪೂಜಾರ, ಬಸವರಾಜ ಕಠಾರೆ, ಪರಶುರಾಮ ಮುಸಳೆ, ಗುರುನಾಥ ಕ್ವಾಟಿ, ಶಿವಮೂರ್ತಿ ಚಲವಾದಿ, ರವಿ ಅಮರಾವತಿ, ತಿಮ್ಮಣ್ಣಾ ಕಾಳೆ, ಪ್ರಕಾಶ ಅರಗಂಜಿ, ಲಕ್ಷ್ಮಣ ವಡ್ಡರ, ಪರಶುರಾಮ ಸುಳ್ಳದ, ಯಲ್ಲಪ್ಪ ಕೋಸಗಿ, ಗುರು ಚೂರಿ, ರವಿಕುಮಾರ ಮಡ್ಡಿ, ಶರಣವ್ವಾ ಚಲವಾದಿ, ಸುಮಿತ್ರಾ ವಂದಾಲ, ರುದ್ರವ್ವಾ ಚಲವಾದಿ, ಸಾಂವಕ್ಕಾ ಚಲವಾದಿ, ಸೀತವ್ವಾ ನಾಗನೂರ, ಸಿದ್ದವ್ವಾ ಚೂರಿ, ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು, ಓಣಿಯ ಹಿರಿಯರು, ಮಹಿಳೆಯರು, ಅನೇಕ ಭಕ್ತರು ಉಪಸ್ಥಿತರಿದ್ದರು.