ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮರಿತಿಬ್ಬೇಗೌಡ ಬೆಂಬಲಿಸಿ

30-kkr1(5-24
ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಗುರುವಾರ ಕಾಂಗ್ರೆಸ್ ಮುಖಂಡರು ಮತಯಾಚಿಸಿದರು. ಕಾಂಗ್ರೆಸ್ ಮುಖಂಡರಾದ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ಚಂದ್ರಮೋಹನ್, ಜಾನೇಗೌಡ, ಲೋಕೇಶ್ ಹಾಜರಿದ್ದರು.
Published on

ಕಿಕ್ಕೇರಿ: ಶಿಕ್ಷಕರ ಸಮಸ್ಯೆಗಳನ್ನು ಒಬ್ಬ ಶಿಕ್ಷಕರಾಗಿ ನೇರವಾಗಿ ಅರಿತಿರುವ ಮರಿತಿಬ್ಬೇಗೌಡರನ್ನು ಶಿಕ್ಷಕ ಕ್ಷೇತ್ರದಿಂದ ಚುನಾಯಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಕೆಪಿಸಿಸಿ ಸದಸ್ಯ ಸುರೇಶ್ ಮನವಿ ಮಾಡಿದರು.

ಕಿಕ್ಕೇರಿ ಹಾಗೂ ಹೋಬಳಿಯ ಮಾದಾಪುರ, ಐಕನಹಳ್ಳಿ, ಸಾಸಲು, ಆನೆಗೊಳ, ಕೃಷ್ಣಾಪುರ ಪ್ರೌಢಶಾಲೆಗಳಿಗೆ ಗುರುವಾರ ತೆರಳಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಮತಯಾಚಿಸಿದರು.

ಶಿಕ್ಷಕರ ಸಮಸ್ಯೆಗಳಿಗೆ ಅವಿರತವಾಗಿ ಶ್ರಮಿಸಲು ಅಭ್ಯರ್ಥಿ ಸದಾ ಬದ್ಧರಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿಯೂ ಕಾಂಗ್ರೆಸ್ ಇದ್ದು ಶಿಕ್ಷಕರ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿ, ಸದನದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿಯಾಗಲಿದ್ದಾರೆ. ಐದು ಬಾರಿ ಎಂಎಲ್‌ಸಿಯಾಗಿ ಸದನದ ಒಳಗೆ, ಹೊರಗೆ ಶಿಕ್ಷಕರ ಸಮಸ್ಯೆ ಅರಿತಿದ್ದಾರೆ. ಪಕ್ಷದ ಗ್ಯಾರಂಟಿ ಯೋಜನೆ ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ. ಇದೇ ರೀತಿ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ಮುಂದಾಗಿರುವ ಮರಿತಿಬ್ಬೇಗೌಡರನ್ನು ಗೆಲ್ಲಿಸಿಕೊಡಿ ಎಂದು ವಿನಂತಿಸಿದರು.

ಮುಖಂಡರಾದ ಚಂದ್ರಮೋಹನ್, ಜಾನೇಗೌಡ, ಲೋಕೇಶ್, ವಿವಿಧ ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net